ಗರ್ಭಿಣಿಗೆ ಡಿಕ್ಕಿ ಹೊಡೆದ ಟ್ರಕ್​​: ಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟ ಮಹಿಳೆ

Prasthutha|

- Advertisement -

ಫಿರೋಜಾಬಾದ್​​(ಉತ್ತರ ಪ್ರದೇಶ): ಗಂಡನ ಮನೆಯಿಂದ ತವರು ಮನೆಗೆ ಹೋಗುತ್ತಿದ್ದಾಗ ಗರ್ಭಿಣಿಗೆ ಟ್ರಕ್​​ ವೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​​ ನಲ್ಲಿ ನಡೆದಿದೆ.

ರಾಮು ಎನ್ನುವವರು ತಮ್ಮ ಗರ್ಭಿಣಿ ಪತ್ನಿ ಕಾಮಿನಿ ಜೊತೆ ಅತ್ತೆ ಮನೆಗೆ ಬೈಕ್ ಮೇಲೆ ಹೋಗುತ್ತಿದ್ದರು. ಬರ್ತಾರಾ ಗ್ರಾಮದ ಬಳಿ ಬರುತ್ತಿದ್ದಂತೆ ಟ್ರಕ್​​​ವೊಂದು ಬೈಕ್​​ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಮಿನಿ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಟ್ರಕ್​​ ಆಕೆಗೆ ಹಿಂದಿನಿಂದ ಗುದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಾಮಿನಿ ಸಾಯುವುದಕ್ಕೂ ಮುಂಚಿತವಾಗಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.



Join Whatsapp