ಶ್ರೀಲಂಕಾಗೆ ನೆರವಾಗುವ ಜವಾಬ್ದಾರಿ ಭಾರತಕ್ಕಿದೆ: ಸರ್ವ ಪಕ್ಷ ಸಭೆಯ ಬಳಿಕ ಫಾರೂಕ್ ಅಬ್ದುಲ್ಲಾ

Prasthutha|

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ನೆರವಾಗುವ ಜವಾಬ್ದಾರಿ ಭಾರತಕ್ಕಿದ್ದೂ, ಈ ಹೊಣೆಗಾರಿಕೆಯನ್ನು ನಾವು ನೆರವೇರಿಸಬೇಕಿದೆ ಎಂದು ಜಮ್ಮು ಕಾಶ್ಮೀರದ ನೇಷನಲ್ ಕಾನ್ಫರೆನ್ಸ್ ಪಕ್ಷದ ಸಂಸದ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

- Advertisement -

ಶ್ರೀಲಂಕಾದಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕರೆಯಲಾದ ಸರ್ವ ಪಕ್ಷದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಶ್ರೀಲಂಕಾದ ಸ್ಥಿತಿ ಶೋಚನೀಯವಾಗಿದ್ದು, ಸಾಮಾನ್ಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಆಹಾರ, ಔಷಧಗಳ ಸಮಸ್ಯೆ ಎದುರಾಗಿದ್ದೂ, ಅಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿರುವ ಆ ದೇಶವನ್ನು ಮೇಲಕ್ಕೆತ್ತುವುದು ಸುಲಭವಲ್ಲ. ಆದರೂ ಭಾರತ ಶ್ರೀಲಂಕಾ ಸಮೀಪದ ದೊಡ್ಡ ದೇಶವಾಗಿದ್ದು, ನಾವು ಆ ದೇಶಕ್ಕೆ ನೆರವಾಗುವ ಅಗತ್ಯವಿದೆ ಎಂದು ಸಭೆಯಲ್ಲಿ ನಾವೆಲ್ಲರೂ ಹೇಳಿದ್ದೇವೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ‌

- Advertisement -

ಶ್ರೀಲಂಕಾಕ್ಕೆ ನೆರವಾಗುವುದು ಮತ್ತು ನಮ್ಮ ದೇಶವನ್ನು ಉಳಿಸಿಕೊಳ್ಳುದರ ನಡುವೆ ಭಾರತ ಸಮತೋಲನವನ್ನು ಸಾಧಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.

ದೈಹಿಕ ಶಿಕ್ಷಣ ವಿದ್ಯಾರ್ಥಿಗಳ ಮೈದಾನದಲ್ಲಿ 3 ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಪ್ರಧಾನಿ ಇಲ್ಲಿಗೆ ಬಂದಿಳಿಯದಿದ್ದರೂ, ಹೆಲಿಪ್ಯಾಡ್ ಇನ್ನು ತೆರವಾಗಿಲ್ಲ. ಇದರಿಂದ ಆಟದ ಮೈದಾನ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ 2 ದಿನಗೊಳಗಾಗಿ ರಸ್ತೆಗೆ ಹಂಪ್ಸ್​ಗಳನ್ನ ಅಳವಡಿಸಬೇಕು ಮತ್ತು ಹೆಲಿಪ್ಯಾಡ್ ತೆರವು ಮಾಡಬೇಕು.

ಸೋಮವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ವಿವಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.



Join Whatsapp