ಫೇಸ್’ಬುಕ್ ನಲ್ಲಿ ಭಯೋತ್ಪಾದಕ ಸಂಘಟನೆಗೆ ಬೆಂಬಲ: ವಿದ್ಯಾರ್ಥಿ ಪ್ರಮೋದ್ ಬಂಧನ

Prasthutha|

ಅಸ್ಸಾಂ: ಫೇಸ್ ಬುಕ್ ನಲ್ಲಿ ಭಯೋತ್ಪಾದಕ ಸಂಘಟನೆ ಉಲ್ಫಾ (ಐ) ಅನ್ನು ಬೆಂಬಲಿಸಿ ವಿವಾದಾತ್ಮಕ ಪೋಸ್ಟ್ ಮಾಡಿದ ಆರೋಪದಲ್ಲಿ ಅಸ್ಸಾಂನ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

- Advertisement -


ತಂಗ್ಲಾ ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಕಲಿತಾ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.


ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಯಲ್ಲಿನ ತನ್ನ ಪೋಸ್ಟ್ ನಲ್ಲಿ, ʻಉದಲಗುರಿಯ ಬೋರಂಗಬರಿಯ ನಿವಾಸಿ ಕಲಿತಾ, ಉಲ್ಫಾ-I ಮತ್ತು ಗುಂಪಿನ ನಾಯಕ ಪರೇಶ್ ಬರುವಾಗಾಗಿ ತನ್ನ ಪ್ರಾಣವನ್ನು ಅರ್ಪಿಸಲು ಸಿದ್ಧನಿದ್ದೇನೆ. ನಾನು ಯಾವಾಗಲೂ ಉಲ್ಫಾವನ್ನು ಬೆಂಬಲಿಸುತ್ತೇನೆʼ ಎಂದು ಬರೆದುಕೊಂಡಿದ್ದಾನೆ.

- Advertisement -


ಅಸ್ಸಾಂನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಎರಡನೇ ಬಂಧನವಾಗಿದೆ. ಮೇ 18 ರಂದು, ಗೋಲಾಘಾಟ್ ನ ಪೊಲೀಸರು ಜೋರ್ಹತ್ ನ ಡಿಸಿಬಿ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಬರ್ಷಶ್ರೀ ಬುರಾಗೊಹೈನ್ ಅವರನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದಕ್ಕಾಗಿ ಬಂಧಿಸಿದ್ದರು.



Join Whatsapp