ಬಡವರ ಅನ್ನಕ್ಕೆ ಕಲ್ಲು ಹಾಕಿದ ಮೋದಿ ಸರ್ಕಾರ: ಬಿ.ಕೆ.ಹರಿಪ್ರಸಾದ್

Prasthutha|

ಬೆಂಗಳೂರು: ಆಝಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ  ರಾಜ್ಯದಲ್ಲಿ ಒಂದು ಕೋಟಿ ರಾಷ್ಟ್ರ ಧ್ವಜಗಳನ್ನು ಹಾರಿಸಲು ಕ್ರಮ ವಹಿಸಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ  ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್  ಪ್ರತಿಕ್ರಿಯಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೊಮ್ಮಾಯಿ  ಅವ್ರೇ… ನಕಲಿ ಪಾಲಿಯೆಸ್ಟರ್ ತಿರಂಗಾ ಬೇಡ, ಅಸಲಿ ಖಾದಿ ತ್ರಿವರ್ಣ ಧ್ವಜ ಹಾರಿಸಿ ಎಂದು ಹೇಳಿದರು.

1.6ಕೋಟಿ ಜನರು ಖಾದಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.ಅವರ ಹೊಟ್ಟೆಗೆ ಮೋದಿ ಸರ್ಕಾರ ತಣ್ಣೀರು ಬಟ್ಟೆ ಬೀಳುವಂತೆ ಮಾಡಿದೆ. ಕರ್ನಾಟಕದ ಹೆಮ್ಮೆಯಾಗಿರುವ ಬೆಂಗೇರಿಯ ಕರ್ನಾಟಕ ಖಾದಿ ಸಂಯುಕ್ತ ಸಂಘದ ಅಸ್ಮಿತೆಗೆ ಪಾಲಿಯೆಸ್ಟರ್ ಧ್ವಜ ಶಾಪ ಎಂದು ಆಕ್ರೋಶಗೊಂಡರು.



Join Whatsapp