ಮಡಿಕೇರಿ-ಮಂಗಳೂರು ರಸ್ತೆ ಸಂಚಾರ ಸಂಪೂರ್ಣ ಬಂದ್: ಶಿರಾಡಿ ಘಾಟಿ ಮಾರ್ಗ ಸಂಚಾರವೂ ಸ್ಥಗಿತ: ಮತ್ತೊಮ್ಮೆ ಕಡಿದ ಕರಾವಳಿ ಸಂಪರ್ಕ

Prasthutha|

- Advertisement -

ಹಾಸನ: ಬೆಂಗಳೂರು – ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿ ರಸ್ತೆ ಮತ್ತೊಮ್ಮೆ ಬಂದ್‌ ಆಗಿದೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ಭೂಕುಸಿತ ಉಂಟಾಗಿದ್ದು, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ಕರಾವಳಿ ಹಾಗೂ ರಾಜಧಾನಿಗೆ ಇದ್ದ ಸಂಪರ್ಕ ಕೊಂಡಿ ಕಳಚಿದೆ.

ಮಡಿಕೇರಿ – ಮಂಗಳೂರು ಮಾರ್ಗವಾದ ನಗರದ ತಿಮ್ಮಯ್ಯ ವೃತ್ತದಲ್ಲಿ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಿ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕೆಳಭಾಗದಲ್ಲಿ ತಡೆಗೋಡೆ ಕುಸಿಯುವ ಭೀತಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬದಲಿ ರಸ್ತೆ ಸೂಚಿಸಿದ್ದು, ಮಡಿಕೇರಿ – ಮಂಗಳೂರಿಗೆ ತೆರಳುವವರು ಹಾಗೂ ಮಡಿಕೇರಿ- ಮಂಗಳೂರಿನಿಂದ ಬರುವವರು ಮೇಕೆರಿ – ತಾಳತ್ತಮನೆ – ಅಪ್ಪಂಗಳ ಮಾರ್ಗವಾಗಿ ಹೋಗುವಂತೆ ಸೂಚಿಸಲಾಗಿದೆ.

- Advertisement -

ಪ್ರಮುಖವಾಗಿ ವಾಣಿಜ್ಯ ವಹಿವಾಟು ಹಾಗೂ ಪ್ರಯಾಣಿಕ ಸಾರಿಗೆಗೆ ಸಮಸ್ಯೆ ಉಂಟಾಗಿದೆ. ಸರಕುಗಳನ್ನು ಹೊತ್ತು ಮಂಗಳೂರಿನ ಎನ್‌ಎಂಪಿಟಿಗೆ ತೆರಳುತ್ತಿದ್ದ ಸರಕು ಸಾಗಣೆ ಲಾರಿಗಳು ನಗರದ ಹೊರವಲಯ ದೇವರಾಯಪಟ್ಟಣದ ಬಳಿ ಸಾಲುಗಟ್ಟಿ ನಿಂತಿವೆ. ಲಘು ವಾಹನಗಳಿಗೆ ಪರ್ಯಾಯ ಮಾರ್ಗ ತೋರಿಸಿದ್ದರೂ, ಭಾರಿ ಸರಕು ಸಾಗಣೆ ವಾಹನಗಳಿಗೆ ಯಾವ ಮಾರ್ಗದಲ್ಲಿ ಸಂಚರಿಸಬೇಕು ಎನ್ನುವ ಮಾಹಿತಿಯೇ ಇಲ್ಲ. ಎರಡು ದಿನಗಳಿಂದ ನಗರದಲ್ಲಿಯೇ ನಿಂತಿರುವ ವಾಹನಗಳ ಚಾಲಕರು, ಮುಂದೇನು ಮಾಡಬೇಕು ಎಂದು ಚಿಂತೆಯಲ್ಲಿದ್ದಾರೆ.



Join Whatsapp