ಭಗತ್ ಸಿಂಗ್ ಓರ್ವ ಉಗ್ರವಾದಿ ಎಂದ ಸಂಸದ: ಕ್ರಮಕ್ಕೆ ಅಕಾಲಿ ದಳ, ಆಪ್ ಆಗ್ರಹ

Prasthutha|

ಹೊಸದಿಲ್ಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಓರ್ವ ಉಗ್ರವಾದಿ ಎಂದು ಹೇಳಿದ ಅಕಾಲಿ ದಳ(ಅಮೃತಸರ್) ಸಂಸದ ಸಿಮ್ರಾನ್ ಜಿತ್ ಸಿಂಗ್ ಮನ್ನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದ್ಮಿ ಪಕ್ಷ ಹಾಗೂ ಅಕಾಲಿ ದಳದ ನಾಯಕರು ಒತ್ತಾಯಿಸಿದ್ದಾರೆ.

- Advertisement -

ಹೊಸದಾಗಿ ಆಯ್ಕೆಯಾದ ಸಂಸದ ಮನ್ನ್ ಅವರು ಈ ಹಿಂದೆ ಭಗತ್ ಸಿಂಗ್ ಕುರಿತು ಆ ಪದದ ಪ್ರಯೋಗ ಮಾಡಿದ್ದ ಬಗ್ಗೆ ಗುರುವಾರ ಕರ್ನಾಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಸಂಸದ “ಸರ್ದಾರ್ ಭಗತ್ ಸಿಂಗ್ ಓರ್ವ ಬ್ರಿಟಿಷ್ ಅಧಿಕಾರಿಯನ್ನು ಕೊಂದಿದ್ದನು, ಅಲ್ಲದೆ ಅಮೃತ್ ಧಾರಿ ಸಿಖ್ ಕಾನ್ ಸ್ಟೇಬಲ್ ಚನ್ನನ್ ಸಿಂಗ್ ನನ್ನು ಹತ್ಯೆಗೈದಿದ್ದನು. ಆ ಸಂದರ್ಭ ಆತ ನ್ಯಾಷನಲ್ ಅಸೆಂಬ್ಲಿಯತ್ತ ಬಾಂಬ್ ಎಸೆದಿದ್ದನು. ಹಾಗಿರುವಾಗ ಭಗತ್ ಸಿಂಗ್ ಓರ್ವ ಉಗ್ರವಾದಿ ಹೌದೇ ಅಥವಾ ಅಲ್ಲವೇ ಎಂದು ನೀವೇ ಹೇಳಿ” ಎಂದಿದ್ದರು. ಇದಕ್ಕೆ ವ್ಯಾಪಕ ಟೀಕೆಗಳೆದುರಾಗಿದೆ.
ಸಂಸದ ಮನ್ನ್ ಅವರು ಕ್ಷಮೆಯಾಚಿಸಬೇಕು ಎಂದು ಆದ್ಮಿ ಪಕ್ಷ ಹಾಗೂ ಅಕಾಲಿ ದಳದ ನಾಯಕರು ಒತ್ತಾಯಿಸಿದ್ದಾರೆ.



Join Whatsapp