ಕೊಡಗು: ಅಯ್ಯಪ್ಪ ಬೆಟ್ಟ ಮತ್ತು ಮಲೆತಿರಿಕೆ ಬೆಟ್ಟ ಕುಸಿಯುವ ಲಕ್ಷಣಗಳು ಗೋಚರಿಸಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಂಡು, ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಿದೆ.
ಕೊಡಗಿನಲ್ಲಿ ಭಾರಿ ಭೂಕುಸಿತ-ಪ್ರವಾಹ ಉಂಟಾಗಿ ಅಪಾರ ನಷ್ಟ, ಸಾವು-ನೋವು ಸಂಭವಿಸಿ ಇನ್ನೇನು ನಾಲ್ಕು ವರ್ಷ ಪೂರ್ಣಗೊಳ್ಳುತ್ತಿದ್ದು, ಇದೀಗ ಭಾರಿ ಮಳೆ, ಭೂಕಂಪಗಳ ಜತೆಗೆ ಈ ಎರಡು ಬೆಟ್ಟಗಳ ಕುಸಿತದ ಆತಂಕ ಎದುರಾಗಿದೆ.
ಅಯ್ಯಪ್ಪ ಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟಗಳ 80 ಕುಟುಂಬಗಳ 221 ಮಂದಿಯನ್ನು ಅವರ ವಾಸಸ್ಥಾನಗಳಿಂದ ತೆರವುಗೊಳಿಸಲಾಗಿದ್ದು, ಅವರನ್ನು ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಆಶ್ರಯ ನೀಡಲಾಗಿದೆ.