ಸರ್ಕಾರದ ಆದೇಶದಲ್ಲೇ ಕನ್ನಡಕ್ಕೆ ಅವಮಾನ: ರಾಜ್ಯ ಸರ್ಕಾರದಿಂದ ಮಹಾ ಎಡವಟ್ಟು

Prasthutha|

ಬೆಂಗಳೂರು: ಸರ್ಕಾರದ ಆದೇಶ ಪ್ರತಿಯಲ್ಲಿ ‌ತಪ್ಪು ತಪ್ಪಾಗಿ ಕನ್ನಡ ಪದ ಬಳಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಮತ್ತೊಂದು ಎಡವಟ್ಟಿಗೆ ಸಿಲುಕಿಕೊಂಡಿದೆ.

- Advertisement -


ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋಗೆ ನಿರ್ಬಂಧ ಆದೇಶವನ್ನು ಸದ್ಯ ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಆದರೆ ಸರ್ಕಾರದ ಆದೇಶದ ಪ್ರತಿಯಲ್ಲಿ ‌ತಪ್ಪು ತಪ್ಪಾಗಿ ಕನ್ನಡ ಪದ ಬಳಕೆ ಮಾಡಿ ಸರ್ಕಾರ ಎಡವಟ್ಟಿಗೆ ಸಿಲುಕಿದೆ.


ಕರ್ನಾಟಕ ಹೆಸರನ್ನು ಸರ್ಕಾರ ತಪ್ಪಾಗಿ ಬರೆದಿದ್ದು, ಆದೇಶದಲ್ಲಿ ಕರ್ನಾಟಕ ಬದಲು ‘ಕರ್ನಾಟಾ’ ಎಂದು, ಪ್ರಸ್ತಾವನೆ ಬದಲು ‘ಪ್ರಸತ್ತಾವನೆ’ ಎಂದು ಉಲ್ಲೇಖ ಮಾಡಲಾಗಿದೆ. ಭಾಗ ವನ್ನು ಬಾಗ ಎಂದು ಬರೆಯಲಾಗಿದೆ.

- Advertisement -


ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ನಿಷೇಧ ಆದೇಶ ವಾಪಸ್ ಪತ್ರಿಯಲ್ಲಿ ಕನ್ನಡ ಪದ ಬಳಕೆ ತಪ್ಪಾಗಿ ಬರೆಯಲಾಗಿದೆ.



Join Whatsapp