ಮಲಯಾಳಂ ಖ್ಯಾತ ನಟ-ನಿರ್ದೇಶಕ ಪ್ರತಾಪ್ ಪೋತ್ತನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ !

Prasthutha|

ಹೊಸದಿಲ್ಲಿ: ಖ್ಯಾತ ಮಲಯಾಳಂ ನಟ-ನಿರ್ದೇಶಕ ಪ್ರತಾಪ್ ಪೋತ್ತನ್ ಅವರು ಚೆನ್ನೈನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಶುಕ್ರವಾರ (ಜುಲೈ 15) ಪತ್ತೆಯಾಗಿದ್ದಾರೆ.

- Advertisement -


ಪ್ರತಾಪ್ ಪೋತ್ತನ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ನಟರಾಗಿ ಖ್ಯಾತಿ ಪಡೆದಿದ್ದ ಪ್ರತಾಪ್ ಪೋತ್ತನ್ 12 ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ ಪ್ರಶಸ್ತಿಗಳನ್ನು ಕೂಡ ಪಡೆದಿದ್ದರು.


ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಪ್ರತಾಪ್ ಅವರು ಕಳೆದ 16 ಗಂಟೆಯ ಹಿಂದೆ ಸಾಲು ಸಾಲು ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ಸಾವಿನ ಬಗ್ಗೆಯೂ ಮಾತನಾಡಿದ್ದರು. ಜಾರ್ಜ್ ಕಾರ್ಲಿನ್ ಅವರ ‘ದೀರ್ಘಾವಧಿಯಲ್ಲಿ ಸಣ್ಣ ಪ್ರಮಾಣದ ಲಾಲಾರಸವನ್ನು ನುಂಗುವುದರಿಂದ ಸಾವು ಸಂಭವಿಸುತ್ತದೆ’ ಎಂಬ ವ್ಯಾಖ್ಯಾನವನ್ನು ಪ್ರತಾಪ್ ಶೇರ್ ಮಾಡಿದ್ದರು
ಅವರು ಸಾಲು ಸಾಲು ಪೋಸ್ಟ್ ನೋಡಿದರೆ ಮನಸ್ಸಿನಲ್ಲಿ ಏನೋ ದುಗುಡವಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ.
ಕಳೆದ 1952 ಆಗಸ್ಟ್ 13ರಂದು ಜನಿಸಿ. ಮದ್ರಾಸ್‌ನಲ್ಲಿ ಶಿಕ್ಷಣ ಪಡೆದು ಸಿನಿಮಾದಲ್ಲಿ ನಟಿಸುವ ಮುನ್ನ ಪ್ರತಾಪ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಪ್ರತಾಪ್ ಬಣ್ಣ ಹಚ್ಚಿದ್ದಾರೆ.

- Advertisement -


ಎರಡು ಮದುವೆ:
1985ರಲ್ಲಿ ನಟಿ ರಾಧಿಕಾ ( ಇಂದಿನ ರಾಧಿಕಾ ಶರತ್‌ಕುಮಾರ್ ) ಅವರನ್ನು ಪ್ರತಾಪ್ ಮದುವೆಯಾದರು. 1986ರಲ್ಲಿ ಈ ಜೋಡಿ ದೂರವಾದ ಬಳಿಕ 1990ರಲ್ಲಿ ಅಮಲಾ ಸತ್ಯನಾಥ್ ಎಂಬುವವರನ್ನು ಪ್ರತಾಪ್ ಮದುವೆಯಾಗಿದ್ದು ಈ ಜೋಡಿಗೆ ಒಬ್ಬಳು ಮಗಳಿದ್ದಾಳೆ. 2012ರಲ್ಲಿ 22 ವರ್ಷಗಳ ದಾಂಪತ್ಯ ಜೀವನಕ್ಕೆ ಮಂಗಳ ಹಾಡಿದರು.


ರಾಷ್ಟ್ರ ಪ್ರಶಸ್ತಿ:
ಪ್ರತಾಪ್ ಕೊನೆಯದಾಗಿ ಮೋಹನ್‌ಲಾಲ್ ಅವರ ಬ್ರಾಜ್ಹೋ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇನ್ನೂ ರಿಲೀಸ್ ಆಗಬೇಕಿದೆ. 1985ರಲ್ಲಿ ಪ್ರತಾಪ್ ಅವರು ಮೀನಿದಂ ಒರ್ ಕಾದಲ್ ಕದಾ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿತ್ತು. ಈ ಚಿತ್ರವನ್ನು ರಾಧಿಕಾ ಅವರೇ ನಿರ್ಮಾಣ ಮಾಡಿದ್ದರು.


ಗಣ್ಯರ ಸಂತಾಪ:
ಪ್ರತಾಪ್ ನಿಧನಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಕನ್ನಡ ನಟಿ, ಎಂಪಿ ಸುಮಲತಾ ಅಂಬರೀಶ್, ಅರುಣಾ ಬಾಲರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.



Join Whatsapp