ಪಾಟ್ನಾ: ಆರ್ಎಸ್ಎಸ್ ಶಾಖೆಗಳಂತೆ ಪಿಎಫ್ಐ ಸಂಘಟನೆ ಯುವಕರಿಗೆ ಸಮರ ಕಲೆ ತರಬೇತಿ ನೀಡುತ್ತದೆ ಎಂದು ಪಾಟ್ನಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯ ಈ ಹೇಳಿಕೆಗೆ ಬಿಜೆಪಿ, ಸಂಘ ಪರಿವಾರದ ಆಕ್ರೋಶ ವ್ಯಕ್ತಪಡಿಸಿದೆ
ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮಾನವಜಿತ್ ಸಿಂಗ್ ಧಿಲ್ಲೋನ್ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ‘ಸಂಸ್ಥೆಯು ಯುವಕರನ್ನು ಸಜ್ಜುಗೊಳಿಸಲು ಮಸೀದಿಗಳು ಮತ್ತು ಮದರಸಾಗಳಲ್ಲಿ ಕೆಲಸ ಮಾಡಿದೆ. ಅದರ ಕಾರ್ಯವಿಧಾನವು ಆರೆಸ್ಸೆಸ್ ಶಾಖೆಗಳ ಕಾರ್ಯ ವಿಧಾನದಂತೆಯೇ ಇತ್ತು. ಅದು ದೈಹಿಕ ಶಿಕ್ಷಣದ ನೆಪದಲ್ಲಿ ಯುವಕರಿಗೆ ತರಬೇತಿ ನೀಡುತ್ತದೆ, ಮತ್ತು ಅಜೆಂಡಾವನ್ನು ಹರಡುತ್ತದೆ. ಸಮರ ಕಲೆಗಳನ್ನು ಕಲಿಸುವ ಸೋಗಿನಲ್ಲಿ ಕೋಲುಗಳು ಮತ್ತು ಕತ್ತಿಗಳನ್ನು ಬಳಸಲು ಸದಸ್ಯರಿಗೆ ತರಬೇತಿ ನೀಡುವ ಬಗ್ಗೆ ನಮಗೆ ದಾಖಲೆಗಳು ದೊರೆತಿವೆ. ಬ್ರೈನ್ ವಾಶ್ ಮಾಡಲು ಮತ್ತು ಜನರನ್ನು ಸಜ್ಜುಗೊಳಿಸಲು ಬಳಸುತ್ತಿದ್ದ ದಾಖಲೆಗಳೂ ದೊರೆತಿವೆ ‘ಎಂದು ಅವರು ಹೇಳಿದ್ದಾರೆ .
ಪೊಲೀಸ್ ಅಧಿಕಾರಿಯ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಎಸ್ಎಸ್ಪಿ ಪಿಎಫ್ಐ ವಕ್ತಾರರಂತೆ ಮಾತನಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ.