ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯದಿಂದ ಅನುಮತಿ ಪಡೆದು ಜಾರಿ ನಿರ್ದೇಶನಾಲಯವು NSE ಮಾಜಿ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಅವರನ್ನು ಗುರುವಾರ ಬಂಧಿಸಿದೆ.
ದೆಹಲಿ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುನೈನಾ ಶರ್ಮಾ ಅವರು ರಾಮಕೃಷ್ಣ ಅವರನ್ನು ನಾಲ್ಕು ದಿನಗಳ ಕಾಲ ವಿಚಾರಣೆಗೊಳಪಡಿಸುವಂತೆ ಅನುಮತಿ ನೀಡಿದ್ದರು.
ಈ ಹಿಂದೆ ನ್ಯಾಯಾಧೀಶರು ನೀಡಿದ ಆದೇಶದ ಮೇರೆಗೆ NSE ಮಾಜಿ ನಿರ್ದೇಶಕಿಯನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಯನ್ನು ಕೋರ್ಟ್’ಗೆ ಹಾಜರುಪಡಿಸುವಂತೆ ವಾರಂಟ್ ಹೊರಡಿಸಿದ್ದರು. ಈ ನಿಟ್ಟಿನಲ್ಲಿ ಆರೋಪಿಯನ್ನು ಹಾಜರುಪಡಿಸಿದ ಬಳಿಕ ಆಕೆಯನ್ನು ವಿಚಾರಣೆಗೊಳಪಡಿಸಲು ಇಡಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿತ್ತು.
ಪ್ರತ್ಯೇಕ ಪ್ರಕರಣದಲ್ಲಿ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದ್ದು, ಚಿತ್ರಾ ರಾಮಕೃಷ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ.