“ರಾಮ ಸೇನಾ” ಜಿಲ್ಲಾಧ್ಯಕ್ಷನಿಂದ ಪ್ರೇಯಸಿಯ ಕೊಲೆ ಯತ್ನ !

Prasthutha|

- Advertisement -

ಧಾರವಾಡ: ಮದುವೆಯಾದ ನಂತರವೂ ತನ್ನ ಪ್ರೀತಿಸುವುದಿಲ್ಲ ಎಂದು “ರಾಮ ಸೇನಾ” ಜಿಲ್ಲಾಧ್ಯಕ್ಷ ಚಾಕುವಿನಿಂದ ಮಹಿಳೆಯನ್ನು ಕೊಲೆ ಯತ್ನ ಮಾಡಿದ ಘಟನೆ ಧಾರವಾಡದ ಸೋನಾಪುರದಲ್ಲಿ ನಡೆದಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ.

ರಾಮಸೇನಾದ ಜಿಲ್ಲಾಧ್ಯಕ್ಷ ವಿಜಯಕುಮಾರ ಕದಂ ತನ್ನ ಪ್ರೇಯಸಿ ಪದ್ಮಾ ಎಂಬಾಕೆಯನ್ನು ಇರಿದು ಕೊಲೆ ಮಾಡುವ ಯತ್ನ ಮಾಡಿದ್ದಾನೆ.

- Advertisement -

ಮದುವೆಯಾದ ನಂತರವೂ ಅಕ್ರಮ ಸಂಬಂಧ ಹೊಂದಿದ್ದ ವಿಜಯ ಕದಂ ಇಂದು ಕೂಡಾ ಮನೆಗೆ ಹೋಗಿದ್ದಾನೆ. ಈ ಸಮಯದಲ್ಲಿ ಪದ್ಮಾ ಈತನನ್ನು ನಿಂದಿಸಿ ಹೊರ ಹಾಕಿದ್ದಾಳೆ. ಅಷ್ಟೇ ಅಲ್ಲ, ಚಾಕು ಹಿಡಿದು ಸಾಯುತ್ತೇನೆ ಎಂದು ಸಿಟ್ಟಾಗಿದ್ದಾಳೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಧಾರವಾಡದ ಉಪನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪದ್ಮಾಳನ್ನ ಕಿಮ್ಸ್ ಗೆ ರವಾನೆ ಮಾಡಲಾಗಿದೆ.



Join Whatsapp