ವೃದ್ಧೆಯನ್ನು ಕಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಸಾಕು ನಾಯಿ

Prasthutha|

ಲಕ್ನೋ: ಮಹಿಳೆಯೊಬ್ಬರನ್ನು ಸಾಕು ನಾಯಿ ಕಚ್ಚಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದ  ಕೈಸರ್ ಬಾಗ್ ಪ್ರದೇಶದಲ್ಲಿ ನಡೆದಿದೆ.

- Advertisement -

ಮೃತ ಮಹಿಳೆ ಸುಶೀಲಾ ತ್ರಿಪಾಠಿ (82)  ನಿವೃತ್ತ ಶಿಕ್ಷಕಿಯಾಗಿದ್ದು ಮನೆಯಲ್ಲಿ  ಒಬ್ಬಳೇ ಇದ್ದಾಗ ಆಕೆಯ ಸಾಕು ನಾಯಿ ದಾಳಿ ಮಾಡಿದೆ. ತಕ್ಷಣವೇ  ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಸಾವನ್ನಪ್ಪಿದ್ದಾರೆ.

ಮೃತ ಮಹಿಳೆ ತನ್ನ 25 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದು , ಪಿಟ್ ಬುಲ್ ಮತ್ತು ಲ್ಯಾಬ್ರಡಾರ್ ಎಂಬ  ಎರಡು ಸಾಕು ನಾಯಿಗಳನ್ನು ಹೊಂದಿದ್ದಾರೆ. ಮಗ ಕೆಲಸದ ಮೇಲೆ ಹೊರಗಿದ್ದಾಗ, ನಾಯಿಗಳು ಬೊಗಳುವುದು ಮತ್ತು ಸಾವಿತ್ರಿಯ ಕೂಗು ಕೇಳಿಸಿತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

- Advertisement -

ನೆರೆಯವರು ಮಾಹಿತಿ ನೀಡಿದ ತಕ್ಷಣ ಮಗ ಮನೆಗೆ ಧಾವಿಸಿದ್ದು,  ನೆರೆಹೊರೆಯವರ ಸಹಾಯದಿಂದ ತಕ್ಷಣವೇ  ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಆಕೆಯ ಕುತ್ತಿಗೆಯಿಂದ ಕಿಬ್ಬೊಟ್ಟೆ ಮತ್ತು ಕಾಲುಗಳವರೆಗೆ ಅನೇಕ ಆಳವಾದ ಗಾಯಗಳಾಗಿದ್ದು ಅತಿಯಾದ ರಕ್ತ ಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.



Join Whatsapp