ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಪಲಾಯನ ಮಾಡಲಿರುವ ಶ್ರೀಲಂಕಾ ಅಧ್ಯಕ್ಷ

Prasthutha|

ಕೊಲಂಬೊ: ಆಕ್ರೋಶಭರಿತ ನಾಗರಿಕರ ಪ್ರತಿಭಟನೆಯನ್ನು ಎದುರಿಸಲಾಗದೆ ದೇಶಬಿಟ್ಟು ಮಾಲ್ಡೀವ್ಸ್ಗೆ ಪರಾರಿಯಾಗಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಇಂದು ರಾತ್ರಿ ಅಲ್ಲಿಂದ ಸಿಂಗಪುರಕ್ಕೆ ಹಾರಲಿದ್ದಾರೆ ಎಂದು ಶ್ರೀಲಂಕಾದ ‘ಡೈಲಿ ಮಿರರ್’ ಪತ್ರಿಕೆ ವರದಿ ಮಾಡಿದೆ. 

- Advertisement -

ಮೂಲಗಳ ಪ್ರಕಾರ, ಗೊಟಬಯ ರಾಜಪಕ್ಸ ಇಂದು ಬೆಳಿಗ್ಗೆ ಮಾಲ್ಡೀವ್ಸ್ ಗೆ ಪರಾರಿಯಾಗಿದ್ದರು. ಇದರ ಬೆನ್ನಲ್ಲೇ ಲಂಕಾದಲ್ಲಿನ ಪ್ರತಿಭಟನೆಗಳು ತೀವ್ರಗೊಂಡಿವೆ. ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜೀನಾಮೆಯನ್ನು ನೀಡಲೇಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಸದ್ಯ ಮಾಲ್ಡೀವ್ಸ್ ನಲ್ಲಿ ಇರುವ ಗೊಟಬಯ ಇಂದು ರಾತ್ರಿ ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ.

- Advertisement -

ಗೊಟಬಯ ಅವರು ಅಧ್ಯಕ್ಷ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆಂದು ಶ್ರೀಲಂಕಾ ಸಂಸತ್ತಿನ ಸ್ವೀಕರ್ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ, ಶ್ರೀಲಂಕಾದ ಹಂಗಾಮಿ ಅಧ್ಯಕ್ಷರನ್ನಾಗಿ ರಾನಿಲ್ ರಾನಿಲ್ ವಿಕ್ರಮಸಿಂಘೆ ಅವರನ್ನು ನೇಮಿಸಲಾಗಿದೆ. ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.



Join Whatsapp