ಮಕ್ಕಾ: ಈ ವರ್ಷದ ಹಜ್ ತೀರ್ಥ ಯಾತ್ರೆ ಕೊನೆಗೊಂಡಿದ್ದರೂ, ದುಲ್ ಹಜ್ಜ್ 20 ನೇ ತಾರೀಕಿನ ನಂತರವಷ್ಟೇ ಉಮ್ರಾ ಪುನರಾರಂಭಗೊಳ್ಳಲಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ದುಲ್ ಹಜ್ಜ್ 20 ರವರೆಗೆ ಉಮ್ರಾ ಮಾಡಲು ಹಾಜಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು .ವಿದೇಶಗಳಿಂದ ಬಂದಿರುವ ಹಾಜಿಗಳ ಸುರಕ್ಷತೆ ಮತ್ತು ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಹಜ್ ಮತ್ತು ಉಮ್ರಾ ಸಚಿವಾಲಯಕ್ಕೆ ಸಂಬಂಧಿಸಿದ ಎರಡು ಹರಂ (ಮಕ್ಕಾ- ಮದೀನಾ) ವ್ಯವಹಾರಗಳ ಸಚಿವಾಲಯವು ಮುಂದಿನ ಹಿಜ್ರಾ ವರ್ಷದ ಉಮ್ರಾ ಮತ್ತು ಹಜ್ ಯೋಜನೆಗಳನ್ನು ಪ್ರಾರಂಭಿಸಿದೆ.