ಬೆಂಗಳೂರು: ಪಿಎಸ್ಐ ಹಗರಣದಲ್ಲಿ ಬಂಧಿತ ಗಣಪತಿ ಭಟ್ ಅವರಿಗೂ ಗೃಹ ಸಚಿವರ ಕಚೇರಿಗೂ ಏನ್ ಸಂಬಂಧ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಾನು ಮೊದಲೇ ಹೇಳಿದ್ದೇನೆ ಪಿಎಸ್ಐ ಹಗರಣದ ಸೂತ್ರಧಾರಿಗಳು ಬೇರೆ ಇದ್ದಾರೆ. ಆದ್ರೆ ತನಿಖೆ ಪಾತ್ರಧಾರಿಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಇಂದು ಪಿಎಸ್ಐ ಹಗರಣ ಸಂಬಂಧ ಸಿಐಡಿ ಬಂಧಿಸಿದ ಗಣಪತಿ ಭಟ್ ಗೂ ಗೃಹ ಸಚಿವರ ಕಚೇರಿಗೂ ಏನ್ ಸಂಬಂಧ ಅರಗ ಜ್ಞಾನೇಂದ್ರ ರವರೇ, ಗೃಹ ಸಚಿವರ ಕಚೇರಿಗೆ ಆರೋಪಿ ಗಣಪತಿ ಭಟ್ ಬರ್ತಾ ಇದ್ದಿದ್ದು ನಿಜಾನಾ ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣ ನಡೆಯುತ್ತಿದ್ದ ದಿನಗಳ ಗೃಹ ಸಚಿವರ ಕಚೇರಿ, ಮನೆಯ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಗೃಹ ಸಚಿವರು ಬಹಿರಂಗ ಮಾಡುತ್ತಾರೆಯೇ ? ಜನರಿಗೆ ವದಂತಿಗಳಿಂದ ಮುಕ್ತಿ ಕೊಟ್ಟು ಪಾರದರ್ಶಿಕವಾಗಿರಬೇಕಾದುದು ಗೃಹ ಸಚಿವರ ಕರ್ತವ್ಯ ಅಲ್ವೇ ಅರಗ ಜ್ಞಾನೇಂದ್ರ ಅವ್ರೆ ? ಎಂದು ಸರಣಿ ಪ್ರಶ್ನೆ ಮಾಡಿದ ಹರಿಪ್ರಸಾದ್, ನ್ಯಾಯಾಂಗ ತನಿಖೆ ನಡೆಯದೆ ಪಿಎಸ್ಐ ಹಗರಣಕ್ಕೆ ಮುಕ್ತಿ ಇಲ್ಲ ಎಂದು ತಿಳಿಸಿದ್ದಾರೆ.