ಶಾಲೆಯ ಮುಂದೆ ಬುಲ್ಡೋಝರ್: ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು..!

Prasthutha|

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕು ಜೋಯಿಸರಹಳ್ಳಿ ಸರ್ಕಾರಿ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ಶಾಲೆಯ 9 ಕೊಠಡಿಗಳು ಬಿದ್ದುಹೋಗುವ ಸ್ಥಿತಿಯಲ್ಲಿದೆ. ಶಿಥಿಲಗೊಂಡ ಕೊಠಡಿಗಳನ್ನು ಕೆಡವಿ 7 ಕೊಠಡಿಗಳನ್ನಾದರೂ ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

- Advertisement -

ಆದರೆ ಇದಕ್ಕೆ ಸೂಕ್ತ ಸ್ಪಂದನೆ ನೀಡದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು,ಕೇವಲ 3 ಕೊಠಡಿಗಳನ್ನು ಪುನರ್ ನಿರ್ಮಿಸಿ ಕೊಡೋದಾಗಿ ಭರವಸೆ ನೀಡಿದ್ದಾರೆ ಇದರಿಂದ ತೀವ್ರವಾಗಿ ನೊಂದ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮಸ್ಥರ ಜೊತೆ ಪ್ರತಿಭಟನೆಗೆ ನಿಂತ ಶಾಲಾ ಮಕ್ಕಳು ಶಿಕ್ಷಣ ಇಲಾಖೆ ವಿರುದ್ದ ಧಿಕ್ಕಾರ ಕೂಗಿದ್ದಾರೆ. ಅದರ ಜೊತೆಗೆ ಶಾಲೆಗೆ ಜಮೀನು‌ ನೀಡಿದ ಜಗನ್ನಾಥ ಬಣಕ್ಕಾರ್ ಕುಟುಂಬಸ್ಥರು ತಮ್ಮ‌ ಜಮೀನಿಗೆ ದಾರಿ ಬಿಟ್ಟು ಕೊಡಿ ಎಂದು ತಕರಾರು ಮಾಡಿದ್ದಾರೆ. ಈ ವಿವಾದ ತಾರಕಕ್ಕೇರಿದ್ದು JCB ಯಿಂದ ಶಾಲಾ‌ ಕೊಠಡಿ ಕೆಡವಲು ಮುಂದಾಗಿದ್ದ ಜಗನ್ನಾಥ ಪೂಜಾರ್ ಹಾಗೂ ಕುಟುಂಬಸ್ಥರನ್ನು ಗ್ರಾಮಸ್ಥರು ತಡೆದಿದ್ದಾರೆ.

- Advertisement -

ಗ್ರಾಮಸ್ಥರು ವಿರೋಧಿಸಿದ ಬಳಿಕ ಗುದ್ದಲಿಯಿಂದ ಶಾಲಾ ಕೊಠಡಿಯ ಕಿಡಕಿ ಹಾಗೂ ಗೋಡೆ ಒಡೆದಿದ್ದಾರೆ ಎಂದು ಜೋಯಿಸರಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಶಾಲೆಯಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದ ಮೇಲೆ ವಿದ್ಯಾಭ್ಯಾಸ ಮಾಡೋದು ಹೇಗೆ ಎಂದು ಬೇಸರ ಮಾಡಿಕೊಂಡ ಮಕ್ಕಳು ಹಾಗೂ ಗ್ರಾಮದ ಜನ ರೊಚ್ಚಿಗೆದ್ದು ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಶಾಲಾ ಶಿಕ್ಷಕರನ್ನು ಶಾಲೆ ಹೊರಗೇ ತಡೆದು ನಿಲ್ಲಸಿದ ಗ್ರಾಮಸ್ಥರು, ಮಕ್ಕಳ ಜೊತೆ ಶಾಲೆ ಮುಂದೆ ನಿಂತು ಧಿಕ್ಕಾರ ಕೂಗಿದರು



Join Whatsapp