ಬಕ್ರಿದ್ ಹಬ್ಬದ ಸಂಭ್ರಮದಲ್ಲಿದ್ದಾಗಲೇ ಅಪಘಾತಕ್ಕೆ ಯುವಕ ಬಲಿ

Prasthutha|

►ಶನಿವಾರ ವಿದೇಶದಿಂದ ಬಂದಿದ್ದ ಯುವಕನಿಗೆ ಜುಲೈ 17ರಂದು ವಿವಾಹ ನಿಶ್ಚಯವಾಗಿತ್ತು

- Advertisement -

ಕಾಸರಗೋಡು: ಶನಿವಾರವಷ್ಟೇ ವಿದೇಶದಿಂದ ಊರಿಗೆ ಬಂದಿದ್ದ ಯುವಕನೋರ್ವ, ಭಾನುವಾರ ಈದ್ ಉಲ್ ಅದ್ಹಾ ಹಬ್ಬದ ದಿನದಂದು ನಡೆದ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ

ಮುಟ್ಟತ್ತೋಡಿ ಹಿದಾಯತ್ ನಗರದ ಇರ್ಫಾನ್ ಮಂಝಿಲ್‌ನ ಇಬ್ರಾಹಿಂ ಎಂಬವರ ಪುತ್ರ ಮುಹಮ್ಮದ್ ಅಶ್ರಫ್ (27) ಮೃತ ವ್ಯಕ್ತಿ.

- Advertisement -

ಭಾನುವಾರ ಸಂಜೆ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್‌ ಪುತ್ತೂರು ಪನ್ನಿಕುನ್‌ ಎಂಬಲ್ಲಿ ಆಟೋ ರಿಕ್ಷಾ ಮತ್ತು ಸ್ಕೂಟರ್ ನಡುವೆ  ಅಪಘಾತ ಸಂಭವಿಸಿದೆ.

ಹಬ್ಬದ ದಿನವಾದುದರಿಂದ ಅಶ್ರಫ್, ತನ್ನ ಸಹೋದರನ ಜೊತೆಗೂಡಿ ತಾಯಿಯ ಸಹೋದರಿಯ ಮನೆಗೆ ತೆರಳಿ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜೊತೆಯಲ್ಲಿದ್ದ ಸಹೋದರ ಇರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಶ್ರಫ್‌ ನ ಪ್ರಾಣ ಉಳಿಸಲಾಗಲಿಲ್ಲ. ಅಪಘಾತದ ರಭಸಕ್ಕೆ ಅಶ್ರಫ್ ತಲೆಗೆ ಗಂಭೀರ ಗಾಯವಾಗಿ, ಮೆದುಳು ಹೊರಬಂದಿತ್ತು. ಅಪಘಾತಕ್ಕೆ ಕಾರಣವಾದ  ಆಟೋ ರಿಕ್ಷಾ ಚಾಲಕ, ನಿಲ್ಲಿಸದೇ ಪರಾರಿಯಾಗಿದ್ದಾನೆ.

 ಇದೇ ತಿಂಗಳ 17ರಂದು ಅಶ್ರಫ್ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.‌ ಆದರೆ ವಿಧಿ ಬೇರೆಯದೇ ಆಗಿದೆ. ಅಶ್ರಫ್, ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.



Join Whatsapp