ಭಾರತದ ರಾಯಭಾರಿ ಕಚೇರಿಗಳನ್ನು ಮುಚ್ಚಿದ ಉಕ್ರೇನ್

Prasthutha|

ಕೀವ್: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನಿಸ್ಕಿಯವರು ಕೀವ್ ನಲ್ಲಿರುವ ಭಾರತ, ಜರ್ಮನಿ ಸೇರಿದಂತೆ ಹಲವು ದೇಶಗಳ ರಾಯಭಾರಿಗಳ ಕಚೇರಿಗಳನ್ನು ತಾತ್ಕಾಲಿಕವಾಗಿ ರದ್ದು ಗೊಳಿಸಿದ್ದಾರೆ. ಅವರಿಗಿದ್ದ ವಿಶೇಷ ಅಧಿಕಾರಗಳು, ಸವಲತ್ತುಗಳು ಇನ್ನಿಲ್ಲ ಎಂದೂ ಹೇಳಿದ್ದಾರೆ.

- Advertisement -

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ನೇರವಾಗಿ ಉಕ್ರೇನ್ ಪರ ನಿಲ್ಲದವರ ವಿರುದ್ಧ ಉಕ್ರೇನಿಗರಿಗೆ ಆಕ್ರೋಶ ಇದೆ. ಅಧ್ಯಕ್ಷನಾಗಿ ನಾನು ಜನರ ಭಾವನೆಗೆ ಸ್ಪಂದಿಸಬೇಕಾಗಿದ್ದು ಈ ಕ್ರಮ ಕೈಗೊಂಡಿರುವುದಾಗಿ ಜೆಲೆನೆಸ್ಕಿ ಹೇಳಿದರು ಎಂದು ವರದಿಯಾಗಿದೆ.

ಮುಖ್ಯವಾಗಿ ಭಾರತ, ಜರ್ಮನಿ, ನಾರ್ವೆ, ಹಾಲೆಂಡ್, ಜೆಕ್ ರಿಪಬ್ಲಿಕ್ ರಾಯಭಾರಿಗಳನ್ನು ಉಕ್ರೇನ್ ಕಿತ್ತೊಗೆದಿರುವುದಾಗಿ ವರದಿಯಾಗಿದೆ.



Join Whatsapp