ಶ್ರೀಲಂಕಾ ಮತ್ತೆ ಪ್ರಕ್ಷುಬ್ಧ: ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ ರಾಜೀನಾಮೆ

Prasthutha|

ಕೊಲಂಬೋ: ಶ್ರೀಲಂಕಾದಲ್ಲಿ ನಾಗರಿಕ ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ ಪ್ರಧಾನಮಂತ್ರಿ ರನಿಲ್ ವಿಕ್ರಮೆಸಿಂಘೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಶ್ರೀಲಂಕಾ ಪ್ರತಿಭಟನಕಾರರು ಅಧ್ಯಕ್ಷ ಗೋಟಬಯೆ ರಾಜಪಕ್ಸೆ ನಿವಾಸಕ್ಕೆ ನುಗ್ಗಿ ದಾಂಧಲೆವೆಬ್ಬಿಸಿದ ಬೆನ್ನಲ್ಲೇ ರನಿಲ್ ವಿಕ್ರಮಸಿಂಘೆ ಪಕ್ಷದ ನಾಯಕರ ಸಭೆ ಕರೆದು ರಾಜೀನಾಮೆಯ ಇಂಗಿತ ವ್ಯಕ್ತಪಡಿಸಿದರು. ಮಾತ್ರವಲ್ಲ ಸರ್ವ ಪಕ್ಷ ಸರ್ಕಾರ ರಚನೆಗೆ ಹಾದಿ ಸುಗಮಗೊಳಿಸುವುದಾಗಿಯೂ ತಿಳಿಸಿದರು.

ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಜಿತ್ ಪ್ರೇಮದಾಸ್ ಅವರು ಒತ್ತಾಯಿಸಿ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

- Advertisement -

ನಕಲಿ ಚರ್ಚೆಯ ಅಗತ್ಯವಿಲ್ಲ. ಪ್ರಧಾನಿ ರಾಜೀನಾಮೆ ನೀಡಲೇಬೇಕು ಎಂದು ಪ್ರೇಮದಾಸ್ ಒತ್ತಾಯಿಸಿದ್ದರು.



Join Whatsapp