ಮಹಾರಾಷ್ಟ್ರ | ಆಷಾಢ ಏಕದಶಿ ಪೂಜೆಯ ಬಳಿಕ ಸಚಿವ ಸಂಪುಟ ವಿಸ್ತರಣೆ; ಮುಖ್ಯಮಂತ್ರಿ ಏಕನಾಥ್ ಶಿಂಧೆ

Prasthutha|

ಮುಂಬೈ: ಮುಂದಿನ ಭಾನುವಾರ ನಡೆಯಲಿರುವ ಆಷಾಢಿ ಏಕದಶಿಯಂದು ವಿಠ್ಠಲನ ವಾರ್ಷಿಕ ಪೂಜಾ ಕಾರ್ಯಕ್ರಮದ ಬಳಿಕ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟವನ್ನು ವಿಸ್ತರಿಸಲಾಗುವುದೆಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.

- Advertisement -

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಮೊದಲು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಪೂರ್ತಿಗೊಳಿಸಲಾಗುವುದೆಂದು ತಿಳಿಸಿದರು.

2.5 ವರ್ಷಗಳ ಹಿಂದೆಯೇ ಶಿವಸೇನೆ-ಬಿಜೆಪಿ ಸರ್ಕಾರ ರಚನೆಯಾಗಬೇಕಿತ್ತು. ಸದ್ಯ ನಮ್ಮ ಜಬಾಬ್ದಾರಿ ಹೆಚ್ಚಿದೆ. ಈ ಹಿಂದೆ ದೇವೆಂದ್ರ ಫಡ್ನವಿಸ್ ಸರ್ಕಾರ ಉತ್ತಮ ಕಾರ್ಯ ಮಾಡಿದೆ. ರೈತರು ಮತ್ತು ಜನರ ಅನುಕೂಲಕ್ಕಾಗಿ ಮಾಡಿದ ಕೆಲಸವನ್ನು ಮಧ್ಯಾವಧಿಯಲ್ಲಿ ನಿಲ್ಲಿಸಲಾಗಿದೆ. ಇದೀಗ ನಾವು ಅದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.

- Advertisement -

ಹಿಂದುಳಿದ ವರ್ಗದ ಮೀಸಲಾತಿಯ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದ ಅವರು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಅನುಸರಿಸುವುದಲ್ಲದೆ, ತಮ್ಮ ಸರ್ಕಾರ ಹಿಂದುಳಿದ ವರ್ಗದ ಮೀಸಲಾತಿ ಇಲ್ಲದೆ ಯಾವುದೇ ಚುನಾವಣೆ ನಡೆಸುವುದಿಲ್ಲ ಎಂದು ತಿಳಿಸಿದರು. ಮುಂದಿನ ನಗರ ಪಂಚಾಯಿತಿ ಚುನಾವಣೆಯನ್ನು ಮಳೆಗಾಲದಲ್ಲಿ ನಡೆಸದಂತೆ ಚುನಾವಣಾ ಆಯೋಗದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಪ್ರಸಕ್ತ ಮುಖ್ಯಮಂತ್ರಿ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರು ದೆಹಲಿಗೆ ಭೇಟಿ ನೀಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.



Join Whatsapp