ಕೊಡಗಿನಲ್ಲಿ ಭಾರಿ ಮಳೆ: ಇಂದಿನಿಂದ ಅಕ್ಟೋಬರ್ 15ರವರೆಗೆ ವಾಹನ ಸಂಚಾರ ನಿಷೇಧ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಭಾರೀ ವಾಹನಗಳ ಸಂಚಾರವನ್ನು ಜುಲೈ 9ರಿಂದ ಅಕ್ಟೋಬರ್ 15 ರವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಸಿ ಸತೀಶ ಆದೇಶ ಹೊರಡಿಸಿದ್ದಾರೆ.

- Advertisement -


ಎಲ್ಲಾ ರೀತಿಯ ಮರದ ದಿಮ್ಮಿ, ಮರಳು ಸಾಗಿಸುವ ವಾಹನಗಳಿಗೆ ಇಂದಿನಿಂದ ಅಕ್ಟೋಬರ್ 15 ರವರೆಗೆ ನಿರ್ಬಂಧ ಹೇರಲಾಗಿದೆ. 16,200 ಕೆ.ಜಿ ಗಿಂತ ಹೆಚ್ಚಿನ ತೂಕದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

ಇನ್ನು ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಪೂರೈಕೆ, ಸರ್ಕಾರಿ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



Join Whatsapp