ಆರೆಸ್ಸೆಸ್ ಕುರಿತ ದೇವನೂರು ಮಹಾದೇವರ ಕೃತಿ ಇತರ ಭಾಷೆಗಳಿಗೂ ಭಾಷಾಂತರ; ಇಂಗ್ಲಿಷ್, ಹಿಂದಿ, ತೆಲುಗು, ತಮಿಳಿನಲ್ಲಿ ಬೇಡಿಕೆ

Prasthutha|

ಬೆಂಗಳೂರು: ಇತ್ತೀಚಿಗೆ ಬಿಡುಗಡೆಗೊಂಡ ಲೇಖಕ ದೇವನೂರು ಮಹಾದೇವ ಅವರ “ಆರ್ ಎಸ್ ಎಸ್: ಆಳ ಮತ್ತು ಅಗಲ” ಕೃತಿಗೆ ಬೇಡಿಕೆ ಹೆಚ್ಚುತ್ತಿದ್ದು, ಈಗ ಹೈದರಾಬಾದ್, ತಮಿಳುನಾಡು ಮತ್ತು ಇತರ ಸ್ಥಳಗಳಿಂದ ಹಲವಾರು ಪ್ರಕಾಶಕರು ಇದನ್ನು ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಇತರ ಭಾಷೆಗಳಲ್ಲಿ ಮುದ್ರಿಸಲು ಮುಂದೆ ಬರುತ್ತಿದ್ದಾರೆ.

- Advertisement -

ಆರೆಸ್ಸೆಸ್ ಚಿಂತಕರಾದ ಗೋಲ್ವಾಲ್ಕರ್, ಸಾವರ್ಕರ್ ಮತ್ತು ಹೆಡಗೇವಾರ್ ಅವರೆಲ್ಲ ಸಂವಿಧಾನದ ಮೌಲ್ಯಗಳನ್ನು ಮೀರಿ ಹೇಗೆ ಸಿದ್ಧಾಂತ ಕಟ್ಟಿದ್ದಾರೆ ಮತ್ತು ಇತಿಹಾಸದ ಸಂಗತಿಗಳನ್ನು ಹೇಗೆಲ್ಲ ತಿರುಚಿದ್ದಾರೆ ಎನ್ನುವುದನ್ನು ಈ ಪುಸ್ತಕದಲ್ಲಿ ಅವರು ತಮ್ಮ ಅಧ್ಯಯನದ ಮಾಹಿತಿಯೊಂದಿಗೆ ಕಟ್ಟಿಕೊಟ್ಟಿದ್ದಾರೆ

ಅಭಿರುಚಿ ಪ್ರಕಾಶನ, ನಾಡು-ನುಡಿ, ಗೌರಿ ಮೀಡಿಯಾ ಟ್ರಸ್ಟ್, ಜನಸ್ಪಂದನ ಟ್ರಸ್ಟ್, ಮಾನವ ಬಂದುತ್ವ ವೇದಿಕೆ ಮತ್ತು ಭಾರತೀಯ ಪರಿವರ್ತನಾ ಸಂಘ ಸೇರಿದಂತೆ ಆರು ಪ್ರಕಾಶಕರು ಸೇರಿ ಈ ಕೃತಿಯನ್ನು ಹೊರತಂದಿದ್ದಾರೆ.

- Advertisement -

ರಾಜಾಜಿನಗರದಲ್ಲಿ ಅಕ್ರುತಿ ಬುಕ್ಸ್ ಸ್ಟೋರ್ ಮಾಲೀಕ ಗುರುಪ್ರಸಾದ್ ಡಿಎನ್ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ, ಹೈದರಾಬಾದ್, ತಮಿಳುನಾಡು ಮತ್ತು ಇತರ ಸ್ಥಳಗಳಿಂದ ಹಲವಾರು ಪ್ರಕಾಶಕರು ಇದನ್ನು ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಇತರ ಭಾಷೆಗಳಲ್ಲಿ ಮುದ್ರಿಸಲು ಮುಂದೆ ಬರುತ್ತಿದ್ದಾರೆ. ಮೂರರಿಂದ ನಾಲ್ಕು ಪ್ರಕಾಶಕರು ಈ ಪುಸ್ತಕವನ್ನು ಇಂಗ್ಲಿಷ್ ನಲ್ಲಿ ಪ್ರಕಟಿಸಲು ಬಯಸಿದ್ದಾರೆ. ಇದು ಕನ್ನಡೇತರ ಓದುಗರಿಗೂ ತಲುಪಲು ಸಹಾಯ ಮಾಡುತ್ತದೆ ಎಂದು ಹೇಳಿದರು.



Join Whatsapp