44 ಬಿಲಿಯನ್ ಡಾಲರ್ ಟ್ವಿಟರ್ ಒಪ್ಪಂದದಿಂದ ಹಿಂದೆ ಸರಿದ ಎಲೋನ್ ಮಸ್ಕ್

Prasthutha|

ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಎಲಾನ್ ಮಸ್ಕ್ ಅವರು, 44 ಶತಕೋಟಿ ಡಾಲರ್ ಗಳಿಗೆ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸುವ ಒಪ್ಪಂದದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.

- Advertisement -

ಟ್ವಿಟ್ಟರ್ ಕಂಪನಿ ನಕಲಿ ಖಾತೆಗಳ ಬಗ್ಗೆ ಮಾಹಿತಿ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ  ಎಲೋನ್ ಮಸ್ಕ್ ಅವರ ವಕೀಲರು ಫೈಲಿಂಗ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

“ಒಪ್ಪಂದದ ಹಲವು ನಿಬಂಧನೆಗಳನ್ನು ಟ್ವಿಟ್ಟರ್ ಉಲ್ಲಂಘಿಸಿದೆ. ಮಸ್ಕ್ ಅವರಿಗೆ ಸುಳ್ಳು ಹಾಗೂ ತಪ್ಪುದಾರಿಗೆ ಎಳೆಯುವಂಥ ಮಾಹಿತಿ ನೀಡಿದಂತೆ ಕಂಡುಬರುತ್ತಿದೆ. ಮಸ್ಕ್ ಇದನ್ನು ನಂಬಿ ವಿಲೀನ ಒಪ್ಪಂದಕ್ಕೆ ಮುಂದಾಗಿದ್ದರು” ಎಂದು ವಿವರಿಸಲಾಗಿದೆ.

- Advertisement -

ಮಸ್ಕ್ ಅವರು ಕಳೆದ ಏಪ್ರಿಲ್ ನಲ್ಲಿ ಪ್ರತಿ ಷೇರಿಗೆ 54.20 ಡಾಲರ್ ಮೌಲ್ಯ ಘೋಷಿಸಿದ್ದರು.

ಈ ನಿರ್ಧಾರದಿಂದಾಗಿ ವಿಸ್ತರಿತ ಟ್ರೇಡಿಂಗ್ ನಲ್ಲಿ ಟ್ವಿಟ್ಟರ್ ಷೇರುಗಳು ಶೇಕಡ 7ರಷ್ಟು ಕುಸಿತ ದಾಖಲಿಸಿದ್ದು, ಇದೀಗ ಉಭಯ ಸಂಸ್ಥೆಗಳ ವಿಲೀನ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಮಸ್ಕ್ ವಿರುದ್ಧ ಕಾನೂನು ಕ್ರಮ ಆರಂಭಿಸುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದೆ ಎಂದು ಟ್ವಿಟ್ಟರ್ ಅಧ್ಯಕ್ಷ ಬ್ರೆಟ್ ಟೇಲೊ ಪ್ರಕಟಿಸಿದ್ದಾರೆ.

ಮಸ್ಕ್ ಅವರ ಜತೆ ಮಾಡಿಕೊಂಡ ಒಪ್ಪಂದದ ಬೆಲೆ ಹಾಗೂ ಷರತ್ತುಗಳಿಗೆ ಅನುಸಾರವಾಗಿ ಒಪ್ಪಂದ ಜಾರಿಗೆ ಟ್ವಿಟ್ಟರ್ ಆಡಳಿತ ಮಂಡಳಿ ಸಿದ್ಧವಿದೆ. ವ್ಯವಹಾರವನ್ನು ಪೂರ್ಣಗೊಳಿಸದಿದ್ದರೆ 1 ಬಿಲಿಯನ್ ಡಾಲರ್ ಬ್ರೇಕ್ ಅಪ್ ಶುಲ್ಕವನ್ನು ಮಸ್ಕ್ ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.



Join Whatsapp