ಸಾಮಾಜಿಕ ಕಾರ್ಯಕರ್ತ ಕಬೀರ್ ಬಾಯಂಬಾಡಿಗೆ ಪ್ರತಿಷ್ಠಿತ ಯುಎಇ ಗೋಲ್ಡನ್ ವೀಸಾದ ಗೌರವ

Prasthutha|

ಅಬುಧಾಬಿ: ಗಣ್ಯರು, ಸಾಧಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನೀಡುವ ಗೋಲ್ಡನ್ ವೀಸಾದ ಗೌರವಕ್ಕೆ ಕೆಸಿಎಫ್ ಅಬಧಾಬಿ ಸಮಿತಿಯ ಪ್ರದಾನ ಕಾರ್ಯದರ್ಶಿ ಹಾಗೂ ಆರೋಗ್ಯ ಕಾರ್ಯಕರ್ತರೂ ಹಾಗಿರುವ ಕಬೀರ್ ಬಾಯಾಂಬಾಡಿ ಬಾಜನರಾಗಿದ್ದಾರೆ.

- Advertisement -

ಕಬೀರ್ ಬಾಯಂಬಾಡಿ ಮೂಲತ ಪುತ್ತೂರು ತಾಲೂಕಿನವರಾಗಿದ್ದು ಹಲವಾರು ವರ್ಷಗಳಿಂದ ಅನಿವಾಸಿಯಾಗಿ ಆರೋಗ್ಯ ಸೇವೆಯ ವಲಯದಲ್ಲಿ ವೃತ್ತಿ ನಿರತರಾಗಿದ್ದಾರೆ.

ಕೋವಿಡ್ ಸಮಯದಲ್ಲಿ ಇವರು ನಡೆಸಿದ ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. ಗೋಲ್ಡನ್ ವೀಸಾ ಗೌರವಕ್ಕೆ ಪಾತ್ರರಾದ ಕಬೀರ್ ಬಾಯಂಬಾಡಿಯವರನ್ನು ಕೆಸಿಎಫ್ ಅಬುಧಾಬಿ ಸಮಿತಿ ಅಭಿನಂದಿಸಿದೆ.



Join Whatsapp