ಸುಳ್ಯದಲ್ಲಿ ಭಾರಿ ಮಳೆ | ಕಮರ್ಷಿಯಲ್ ಕಾಂಪ್ಲೆಕ್ಸ್ ಬಳಿ ಗುಡ್ಡ ಕುಸಿತ: ತಪ್ಪಿದ ಅನಾಹುತ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸುಳ್ಯದ ಜಾಲ್ಸೂರ್ ಕಮರ್ಷಿಯಲ್ ಕಾಂಪ್ಲೆಕ್ಸ್ ಬಳಿ ಗುಡ್ಡ ಕುಸಿದು ಬಿದ್ದದೆ.

- Advertisement -

ಸುಳ್ಯದ ಜಾಲ್ಸೂರ್ ಬಳಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟದ ಹಿಂದಿನ ಗುಡ್ಡ ಕುಸಿದು ಬಿದ್ದಿದ್ದು, ಕಾಂಪ್ಲೆಕ್ಸ್ ನ ಒಳಗಡೆ ಇದ್ದ ಜನ ಆತಂಕದಿಂದ ಹೊರಗಡೆ ಬಂದಿದ್ದಾರೆ.

ಇನ್ನೊಂದೆಡೆ ಸುಳ್ಯದ ಪೈಚಾರ್ ಬಳಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

- Advertisement -

ಅಲ್ಲದೆ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಮುಂದುವರಿದಿದ್ದು, ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದು ಮತ್ತು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.



Join Whatsapp