ಹರಿಯಾಣ: ಪ್ರವಾದಿ ಮತ್ತು ಇಸ್ಲಾಂ ವಿರುದ್ಧ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಬಿಜೆಪಿ ಮತ್ತೊಬ್ಬ ಐಟಿ ಸೆಲ್ ಉಸ್ತುವಾರಿಯನ್ನು
ತನ್ನ ಹುದ್ದೆಯಿಂದ ಉಚ್ಛಾಟಿಸಿದೆ.
2017ರಲ್ಲಿ ಪ್ರವಾದಿ ಮತ್ತು ಇಸ್ಲಾಂ ವಿರುದ್ಧ ನಿಂದನೆ ಮಾಡಿದ ಟ್ವೀಟ್ ಈಗ ವೈರಲ್ ಆಗಿದ್ದು, ಆತನನ್ನು ಬಂಧಿಸಬೇಕು ಎಂಬ ಆಗ್ರಹವು ವ್ಯಾಪಕವಾಗಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅರುಣ್ ಯಾದವ್ ಎಂಬಾತನನ್ನು ಬಿಜೆಪಿ ಹುದ್ದೆಯಿಂದ ಅಮಾನತುಗೊಳಿಸಿದೆ.
ಅರುಣ್ ಯಾದವ್ ಪದಚ್ಯುತಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಒ.ಪಿ.ಧನ್‌ಕರ್ ಖಚಿತ ಪಡಿಸಿಕೊಂದ್ದಾರೆ. ವರುಷಗಳ ಹಿಂದೆ ಮಾಡಿದ ಟ್ವೀಟ್ ಇತ್ತೀಚೆಗೆ ಸಾಮಾಜಿಕ ಜಾಲತಾಣ ದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಆದರೆ ಯಾದವ್ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.