ಬೆಂಗಳೂರು; ನ್ಯಾಯ ಕೇಳಲು ಹೋದರೆ ಗಧರಿಸಿ ಕಳುಹಿಸುತ್ತಾರೆ ಎಂದು ಹರ್ಷನ ಸಹೋದರಿ ಹೇಳಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗೃಹಸಚಿವರು ಪ್ರತಿಕ್ರಯಿಸಿದ್ದು ಹರ್ಷಾ ಕುಟುಂಬ ಹೇಳಿದ್ದೆಲ್ಲಾ ಮಾಡೋಕೆ ಆಗಲ್ಲಾ ಎಂದು ಹೇಳಿದ್ದಾರೆ.
ಹರ್ಷಾ ಕುಟುಂಬದವರು ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನು ಎಳೆದು ತಂದು ಅವರ ಮುಂದೆ ಹೊಡೆಯಲು ಆಗುತ್ತಾ ಅಥವಾ ಅವರ ಮೇಲೆ ಫೈರ್ ಮಾಡಲು ಆಗುತ್ತಾ? ಎಂದು ಅರಗ ಜ್ಞಾನೇಂದ್ರ ಅವರು ಪ್ರಶ್ನಿಸಿದ್ದಾರೆ.
ನಾನು ಹರ್ಷ ಕುಟುಂಬ ಬೇಟಿ ಮಾಡಿಲ್ಲ ಅಂತ ಹೇಳಿದ್ದಾರೆ . ಆದರೆ ನಾನು ಅವರ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಭೇಟಿ ಮಾಡಿದಾಗ ಅವರು ಏನೇನೂ ಮಾತನಾಡುತ್ತಾರೆ. ಯಾವತ್ತು ಮಾಡುತ್ತೀರಿ, ಯಾವ ಕ್ಷಣದಲ್ಲಿ ಮಾಡುತ್ತೀರಿ ಅಂತೆಲ್ಲಾ ಕೇಳುತ್ತಾರೆ. ನಾನು ಗೃಹ ಸಚಿವನಾಗಿ ಏನು ಮಾತನಾಡಲು ಸಾಧ್ಯ? ಹಾಗಾಗಿ ಜಾಸ್ತಿ ಮಾತನಾಡುವುದಿಲ್ಲ ಎಂದು ತೀರ್ಮಾನಿಸಿದ್ದೇವೆ.
ಸಮಾಧಾನವಾಗಿ ಮಾತನಾಡಿ ಎಂದರೆ ಕೂಗಿಕೊಂಡು ಹೋಗಿ ದಾರಿ ಮಧ್ಯೆ ನಿಂತು ಬೊಬ್ಬೆ ಹಾಕಿದ್ದಾರೆ ಎಂದು ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.