ಕೊಡಗು: ನಿರಂತರ ಮಳೆ ಮುಂದುವರಿದಿರುವ ಕಾರಣ ಜಿಲ್ಲಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆಯಿಂದ ಮಡಿಕೇರಿ – ಚೆಟ್ಟಲ್ಲಿ ಕತ್ತೆಲೆಕಾಡು ಬಳಿ ಬರೆ ಕುಸಿದಿದ್ದು ಮರಗಳು ರಸ್ತೆಗೆ ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ನಾಪೋಕ್ಲು – ಹೊದ್ದುರುಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತ ಗೊಂಡಿದೆ. ಜಿಲ್ಲೆಯ ಜಲಪಾತಗಳು ಬೋರ್ಗರೆಯುತ್ತಿವೆ. ಮಡಿಕೇರಿ ಪ್ರಸಿದ್ಧ ಜಲಪಾತ ಅಬ್ಬಿ ಫಾಲ್ಸ್ ನ ಮನಮೋಹಕ ದೃಶ್ಯ ಪ್ರವಾಸಿಗರ ಕಣ್ಮನ ತಣಿಸುವಂತಿದೆ.
ಸದ್ಯ ಮಳೆ ಆರ್ಭಟ ಮುಂದುವರಿದಿರುವುದರಿಂದ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ. ಇಂದು ಕೊಡಗಿನ ಎಲ್ಲಾ ಅಂಗನವಾಡಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.