ಮಂಗಳೂರು: ಸೊರಬ ತಾಲೂಕಿನ ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಜತೆಗಿರುವನು ಚಂದಿರ’ ನಾಟಕಕ್ಕೆ ಮುಸ್ಲಿಮ್ ಪ್ರಧಾನ ಕಥಾಹಂದರ ಹೊಂದಿದೆ ಎಂದು ಆರೋಪಿಸಿ ಬಜರಂಗದಳ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ಅಡ್ಡಿಪಡಿಸಿ ದಾಂಧಲೆಗೈದ ಘಟನೆಯನ್ನು ಖಂಡಿಸಿ ಸಮುದಾಯ ಮಂಗಳೂರು ಮತ್ತು ಜಿಲ್ಲೆಯ ಪ್ರಗತಿಪರ ಕಲಾವಿದರು ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಜೊತೆಗಿರುವನು ಚಂದಿರ ನಾಟಕದ ಮೇಲಿನ ಸಂಘಪರಿವಾರದವರ ದಾಳಿಯನ್ನು ಖಂಡಿಸಿದ ಪ್ರತಿಭಟನಕಾರರು, ಆರ್ ಎಸ್ ಎಸ್ ವಿರುದ್ಧ ಘೋಷಣೆ ಕೂಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಮಚಂದ್ರ ಉಚ್ಚಿಲ, ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು, ಮಾಧುರಿ ಬೋಳಾರ್, ಸಂತೋಷ್ ಬಜಾಲ್ ಮೊದಲಾದವರು ಪಾಲ್ಗೊಂಡಿದ್ದರು.