ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಗಳು ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಹಳೆಮೂಡಿಗೆರೆಯಲ್ಲಿ ನಡೆದಿದೆ.
- Advertisement -
ಅಪಾಯಕ್ಕೊಳಗಾದ ಕಾರು ಮಾಜಿ ಸಚಿವೆ ಮೋಟಮ್ಮ ಸಹೋದರ ಅನಂತು ಅವರಿಗೆ ಸೇರಿದ್ದಾಗಿದೆ. ಎಂ.ಎಸ್ ಅನಂತು ಪತ್ನಿ ಸೇರಿದಂತೆ ಕಾರಿನಲ್ಲಿದ್ದ ಐವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕಾರಿನ ಮೇಲೆ ಮರದ ಕೊಂಬೆಗಳು ಬೀಳುವ ಸಿಸಿಟಿವಿ ದೃಶ್ಯ ನೋಡುಗರ ಮೈ ಜುಮ್ ಎನಿಸುವಂತಿದೆ.