ನವದೆಹಲಿ: ಗ್ಲೋಬಲ್ ಡೌನ್ ಸಿಂಡ್ರೋಮ್ ಫೌಂಡೇಶನ್ ನ ವಾರ್ಷಿಕ ಫ್ಯಾಷನ್ ಶೋ (ಬಿ ಬ್ಯೂಟಿಫುಲ್, ಬಿ ಯುವರ್ಸೆಲ್ಫ್) ಗೆ ಅಧಿಕೃತವಾಗಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೂಲದ ರಿಝಾ ರೆಜಿ ಪಾತ್ರರಾಗಿದ್ದಾರೆ.
ಈ ಕಾರ್ಯಕ್ರಮವು ನವೆಂಬರ್ 12ರಂದು ಅಮೆರಿಕದ ಡೆನ್ವರ್ ನಲ್ಲಿ ನಡೆಯಲಿದ್ದು, ಅರಿವಿನ ದೌರ್ಬಲ್ಯದ ಬಗ್ಗೆ ಸಂಶೋಧನೆಗಾಗಿ ನಿಧಿ ಸಂಗ್ರಹಿಸಲಿದೆ.
23 ವರ್ಷದ ರಿಜಾ ನಗರದ ಕ್ರಿಸಾಲಿಸ್ ಪರ್ಫಾರ್ಮೆನ್ಸ್ ಆರ್ಟ್ ಸೆಂಟರ್ ನಲ್ಲಿ ರಂಗಭೂಮಿ ವೃತ್ತಿನಿರತರಾಗಿರುವ ಡಯಾನಾ ತೋಳೂರ್ ಅವರ ಬಳಿ ತರಬೇತಿ ಪಡೆದಿದ್ದಾರೆ. ಅಲ್ಲದೆ,ನೃತ್ಯ ಸಂಯೋಜಕ ಶಿಯಾಮಕ್ ದಾವರ್ ಅವರೊಂದಿಗೂ ನೃತ್ಯ ತರಬೇತಿ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ರಿಜಾ, ರಂಗಭೂಮಿ ನನ್ನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದು ನನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ತೆರೆಯಲು ಮತ್ತು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು ಎಂದು ತಿಳಿಸಿದ್ದಾರೆ.