ಮಂಗಳೂರು: ನಗರದ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ಸಂದರ್ಭ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶಶಿಕುಮಾರ್ ಅವರು ಕಿಶೋರ್ ಶೆಟ್ಟಿಗೆ ಬಟ್ಟೆ ಬಿಚ್ಚಿಸಿ, ಏನಪ್ಪ ಮೈಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ ಎಂದು ಕೇಳಿದ್ದಾರೆ. ಇದಕ್ಕೆ ಕಿಶೋರ್ ಶೆಟ್ಟಿ ತಾಯಿಯ ಟ್ಯಾಟೋ ಎಂದು ಉತ್ತರಿಸಿದ್ದಾನೆ. ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಕಮೀಷನರ್ ಹೇಳಿದ್ದಾರೆ.
ಬಳಿಕ ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದೀಯಾ, ಸಪ್ಲೈ ನಿಲ್ಲಿಸಿದ್ದೀಯಾ? ನೀನು ತಿನ್ನುತ್ತಿಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ? ಎಂದು ಕಿಶೋರ್ ಶೆಟ್ಟಿಗೆ ಕಮಿಷನರ್ ವಿಚಾರಿಸಿಕೊಂಡಿದ್ದಾರೆ.
ಅಲ್ಲದೆ, ಮಂಗಳೂರಿನ ಪೊಲೀಸ್ ಮೈದಾನದಲ್ಲಿ ಇತರ ರೌಡಿಗಳಿಗೂ ಕಮೀಷನರ್ ಎನ್ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಿಶೋರ್ ಶೆಟ್ಟಿಯ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಆಂಕರ್ ಅನುಶ್ರೀ ಜೊತೆಗೆ ಕೇಳಿ ಬಂದಿತ್ತು. ಪ್ರಕರಣದಲ್ಲಿ ಕಿಶೋರ್ ಶೆಟ್ಟಿಯ ವಿಚಾರಣೆಯೂ ನಡೆದಿತ್ತು.