ನವದೆಹಲಿ: ದೇಶಾದ್ಯಂತ ಹಲವು ಪ್ರದೆಶಗಳಲ್ಲಿ ಚೀನಾ ಮೊಬೈಲ್ ಸಂಸ್ಥೆ ವೀವೋಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.
ದಕ್ಷಿಣದ ರಾಜ್ಯಗಳೂ ಸೇರಿದಂತೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ರಾಜ್ಯಗಳಲ್ಲಿ ವೀವೋಗೆ ಸಂಬಂಧಿಸಿದ ಸುಮಾರು 40 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ದಾಳಿಯ ಕುರಿತಾಗಿ ವೀವೋ ಈ ವರೆಗೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಸಿಬಿಐ ಕೂಡ ವಿವೋ ಕಂಪೆನಿ ವಿರುದ್ಧಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಭಾರತದ ಷಿಯೋಮಿ ಟೆಕ್ನಾಲಜಿ ಲಿಮಿಟೆಡ್ ಗೆ ಸೇರಿದ್ದ 5,551.27 ಕೋಟಿ ರೂಪಾಯಿ ಮೊತ್ತವನ್ನು ಬ್ಯಾಂಕ್ ಖಾತೆಗಳಿಂದ ಎಫ್ಇಎಂಎಯ ನಿಬಂಧನೆಗಳಡಿಯಲ್ಲಿ ವಶಪಡಿಸಿಕೊಂಡಿತ್ತು.