ಆಲಪ್ಪುಝ ಆರೆಸ್ಸೆಸ್ ವಿರೋಧಿ ಘೋಷಣೆ: ಪಿಎಫ್ಐ ಸದಸ್ಯರು ಸೇರಿ ಎಲ್ಲಾ 31 ಮಂದಿಗೂ ಜಾಮೀನು

Prasthutha|

ಕೊಚ್ಚಿ: ಆಲಪ್ಪುಝದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಸಭೆಯಲ್ಲಿ ಆರೆಸ್ಸೆಸ್ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಂಧಿತರಾಗಿ ಜೈಲಿನಲ್ಲಿದ್ದ ಸಂಘಟನೆಯ ರಾಜ್ಯ ಮತ್ತು ಜಿಲ್ಲಾ ನಾಯಕರು ಸೇರಿದಂತೆ ಎಲ್ಲಾ 31 ಜನರಿಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

- Advertisement -

ಅವರು ರಾಜ್ಯವನ್ನು ತೊರೆಯಬಾರದು ಎಂಬ ಷರತ್ತಿನ ಮೇಲೆ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜಿಸಿದ್ದ “ಪ್ರಜಾಪ್ರಭುತ್ವ ರಕ್ಷಿಸಿ” ಸಮ್ಮೇಳನದಲ್ಲಿ ಬಾಲಕನೋರ್ವ ಕೂಗಿದ ಆರೆಸ್ಸೆಸ್ ವಿರೋಧಿ ಘೋಷಣೆ ಧಾರ್ಮಿಕ ದ್ವೇಷವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

- Advertisement -

ಇದು ಅಧಿಕೃತ ಘೋಷಣೆಯಲ್ಲ ಮತ್ತು ಅದರ ಕೆಲವು ಸಾಲುಗಳನ್ನು ಸ್ವೀಕರಿಸಲಾಗಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದ್ದರೂ, ಪೊಲೀಸರು ರಾಜ್ಯ ನಾಯಕರು ಸೇರಿದಂತೆ ಹಲವಾರು ಜನರನ್ನು 40 ದಿನಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.

ಪೊಲೀಸರ ಈ ಪಕ್ಷಪಾತದ ನಿಲುವಿನ ವಿರುದ್ಧ ವಿವಿಧ ವಲಯಗಳಿಂದ ತೀವ್ರ ಪ್ರತಿಭಟನೆಗಳೂ ನಡೆದಿದ್ದವು.



Join Whatsapp