ಇನ್ಮುಂದೆ ಸೋಶಿಯಲ್ ಮೀಡಿಯಾದ ಮೇಲೆ ಕೇಂದ್ರದ ಕಣ್ಣು : ನೆಟ್ಟಿಗರಿಗೆ ಸೆಂಟ್ರಲ್ ಕಟ್ಟೆಚ್ಚರ

Prasthutha|

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಭಾಷಣ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ‘ದ್ವೇಷದ ಭಾಷಣ ವಿರೋಧಿ ಕಾನೂನು’ ಜಾರಿಗೆ ತರಲು ಸಿದ್ಧತೆ ನಡೆಸಿದ್ದು ಸೋಷಿಯಲ್ ಮೀಡಿಯಾದ ಮೇಲೆ ಕೇಂದ್ರ ಕಣ್ಣಿಟ್ಟಿದೆ.

- Advertisement -

ಕಾನೂನಿನ ಕರಡು ಈಗಾಗಲೇ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಮುಂಗಾರು ಅಧಿವೇಶನದಲ್ಲಿ ದ್ವೇಷದ ಭಾಷಣಕ್ಕೆ ಸಂಬಂಧಿಸಿದ ಚರ್ಚೆ ಆಗಬಹುದು ಎನ್ನಲಾಗಿದೆ.

ಈ ಕಾನೂನಿನಲ್ಲಿ ಹಿಂಸಾಚಾರವನ್ನ ಹರಡುವ ವಿಷಯ ಮಾತ್ರವಲ್ಲದೇ, ಸುಳ್ಳುಗಳನ್ನ ಹರಡುವ ಮತ್ತು ಆಕ್ರಮಣಕಾರಿ ಆಲೋಚನೆಗಳನ್ನ ಹೊಂದಿರುವುದು ಕೂಡ ಈ ಕಾನೂನಿನ ವ್ಯಾಪ್ತಿಗೆ ಬರಲಿದೆ ಎನ್ನಲಾಗಿದೆ.



Join Whatsapp