ಮಂಗಳೂರು | ಪೌರ ಕಾರ್ಮಿಕರ ಮುಷ್ಕರ: ಗಬ್ಬು ನಾರುತ್ತಿದೆ ನಗರ

Prasthutha|

ಮಂಗಳೂರು: ರಾಜ್ಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದು, ಪೌರ ಕಾರ್ಮಿಕರಿಲ್ಲದೆ ಕಸದಿಂದ ನಗರ ತುಂಬಿ ತುಳುಕುತ್ತಿದೆ.

- Advertisement -

ತ್ಯಾಜ್ಯ ಸಂಗ್ರಹದ ವಾಹನ ಚಾಲಕರು, ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗಾಗಿ ನಾಲ್ಕು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳೂರಿನ ನಗರಾದ್ಯಂತ ತ್ಯಾಜ್ಯ ಸಾಗಾಟ, ನಿರ್ವಹಣೆ ಮೂರು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದು, ಜನ ನಡೆದಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ನಗರದ ಸ್ಟೇಟ್ ಬ್ಯಾಂಕ್, ಬಂದರು, ಹಂಪನಕಟ್ಟೆ, ನಂತೂರು ಮುಂತಾದೆಡೆ ಕಸದ ರಾಶಿ ಬಿದ್ದಿದ್ದು ನಿರಂತರ ಮಳೆಯಿಂದಾಗಿ ಗಬ್ಬು ನಾರುತ್ತಿದೆ. ನಾಯಿ, ದನಗಳು ಕಸವನ್ನು ಚೆಲ್ಲಪಿಲ್ಲಿ ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಪ್ರತಿಭಟನಕಾರರು ಎಚ್ಚರಿಕೆಯನ್ನು ನೀಡಿದ್ದಾರೆ.

- Advertisement -



Join Whatsapp