ಖಾಸಗಿ ಬಸ್ ಸಿಬ್ಬಂದಿಯ ಹುಚ್ಚಾಟ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ

Prasthutha|

ಕೊಲ್ಲಂ: ಪ್ರವಾಸಕ್ಕೆ ಬುಕ್ ಮಾಡಿದ ಖಾಸಗಿ ಬಸ್’ನ ಸಿಬ್ಬಂದಿ ಪ್ರಯಾಣ ಆರಂಭಿಸುವ ಮೊದಲು ಬಸ್ಸಿನ ಮೇಲೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಕೊಂಬನ್ ಎಂಬ ಬಸ್ಸಿನ ಮಾಲಕ ಮತ್ತು ಸಿಬ್ಬಂದಿಯನ್ನು ಪುನ್ನಪ್ರ ಮತ್ತು ತಗಡಿ ಎಂಬಲ್ಲಿಂದ ಕೇರಳ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಕೊಂಬನ್ ಬಸ್ ಪ್ರವಾಸಕ್ಕೆ ಹೊರಡಲು ಅಣಿಯಾಗಿದ್ದ ವೇಳೆ ಬಸ್ಸಿನ ಮೇಲ್ಛಾವಣಿ ಹತ್ತಿದ ಸಿಬ್ಬಂದಿ, ಅಲ್ಲಿ ಪಟಾಕಿ ಸಿಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಪಕ್ಕದಲ್ಲೇ ವಿದ್ಯುತ್ ತಂತಿ ಗೋಚರಿಸಿದೆ.

- Advertisement -

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, ಬಸ್ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಸದ್ಯ ಹುಚ್ಚಾಟ ಮೆರೆದ ಬಸ್ ಸಿಬ್ಬಂದಿ ಮತ್ತು ಮಾಲಕರನ್ನು ಬಂಧಿಸಿದ್ದಾರೆ.



Join Whatsapp