ತಬ್ಲೀಗ್ ಜಮಾಅತ್ ಸದಸ್ಯನಿಗೆ ಥಳಿಸಿ, ನಗ್ನಗೊಳಿಸಿದ ದುಷ್ಕರ್ಮಿಗಳು

Prasthutha|

ಕೊಲ್ಕತ್ತಾ: ತಬ್ಲೀಗ್ ಜಮಾಅತ್ ಸದಸ್ಯರೊಬ್ಬರು ದಾರಿ ತಪ್ಪಿ ಹಿಂದೂ ಬಾಹುಳ್ಯದ ಪ್ರದೇಶಕ್ಕೆ ತಲುಪಿದಾಗ ಗ್ರಾಮಸ್ಥರು ವ್ಯಕ್ತಿಗೆ ತೀವ್ರವಾಗಿ ಥಳಿಸಿ ಅವರನ್ನು ನಗ್ನಗೊಳಿಸಿರುವ ಘಟನೆ ಪಶ್ಚಿಮ ಬಂಗಾಳದ ರಾಮನಾಥ್ ಪುರದಲ್ಲಿ ನಡೆದಿದೆ.

- Advertisement -

 ಅಸ್ಸಾಮ್ ನ ತಬ್ಲೀಗ್ ಜಮಾಅತ್ ಸದಸ್ಯ ಫಜರ್ ಅಲಿ (29) ಹಲ್ಲೆಗೊಳಗಾದವರು.

ಫಜರ್ ಅಲಿ ಅವರು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ಕಾರ್ಯನಿಮಿತ್ತ ಹೋಗುತ್ತಿದ್ದಾಗ ದಾರಿ ತಪ್ಪಿ ಅವರು ರಾಮನಾಥಪುರ ತಲುಪಿದ್ದಾರೆ. ಅವರ ವೇಷಭೂಷಣ ನೋಡಿದ ಗ್ರಾಮಸ್ಥರು ಅವರನ್ನು ಹಿಡಿದು ಥಳಿಸಿ ನಗ್ನಗೊಳಿಸಿ, ವೀಡಿಯೋ ಮಾಡಿದ್ದಾರೆ.

- Advertisement -
https://twitter.com/AsianDigest/status/1543821466998677505?s=20&t=fhJGykJX7wkxrJ4ycm4VGQ

ವೀಡಿಯೋದಲ್ಲಿ ಗ್ರಾಮಸ್ಥರು ಕೈಯಲ್ಲಿ ದೊಣ್ಣೆ ಹಿಡಿದು ವ್ಯಕ್ತಿಯನ್ನು ಸುತ್ತುವರಿದಿರುವುದು ನಂತರ ವ್ಯಕ್ತಿ ಅಲ್ಲಿಂದ ಓಡಿ ಹೋಗುತ್ತಿರುವುದು ಕಂಡುಬಂದಿದೆ.



Join Whatsapp