ಅನುಮತಿ ಪಡೆಯದೆ ಪ್ರೊಟೆಸ್ಟ್ : ಲಾಠಿಚಾರ್ಜ್ ಮಾಡಿ ಕನ್ಹಯ್ಯಾ ಕೊಲೆ ವಿರೋಧಿ ಪ್ರತಿಭಟನಕಾರರನ್ನು ಓಡಿಸಿದ ಪೊಲೀಸ್

Prasthutha|

ಬಳ್ಳಾರಿ: ಉದಯಪುರ ಕನ್ಹಯ್ಯಾ ಕೊಲೆ ಪ್ರಕರಣ ಖಂಡಿಸಿ ಹೊಸಪೇಟೆಯಲ್ಲಿ ಕೆಲವು ಜನರು ಅನುಮತಿಯಲ್ಲದೆ ಪ್ರತಿಭಟನೆಗೆಂದು ಬೀದಿಗಿಳಿದಿದ್ದರು. ಕೊಲೆ ಆರೋಪಿಗಳನ್ನು ಬಂಧಿಸೋದಷ್ಟೇ ಅಲ್ಲ ನಡು ಬೀದಿಯಲ್ಲಿ ಗಲ್ಲೇಗೇರಿಸಬೇಕೆಂದು ಆಗ್ರಹಿಸಿ ನಡೆಯುತ್ತಿರೋ ಈ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು ಪೊಲೀಸ್ ಲಾಠಿಚಾರ್ಚ್ ಮಾಡಿ ಚದುರಿಸಿದ್ದಾರೆ.

- Advertisement -

ಶ್ರೀರಾಮ ಸೇನೆ ಸಂಘಟನೆ ನೇತೃತ್ವದಲ್ಲಿ ಶನಿವಾರ ಹೊಸಪೇಟೆಗೆ ಬಂದ್ ಗೆ ಕರೆ ನೀಡಲಾಗಿದ್ದು, ಈ ಕುರಿತು ಪೊಲೀಸರು ಮತ್ತು ತಹಶೀಲ್ದಾರರಿಗೆ ಮನವಿಯನ್ನು ಸಂಘಟಕರು ಕಳೆದೆರಡು ದಿನಗಳ ಹಿಂದೆಯೇ ಸಲ್ಲಿಸಿದ್ದರು. ಆದರೆ ಬಂದ್ ಪ್ರತಿಭನೆಗೆ ಸೀಮಿತವಾಗಿದೇ ಹೊಸಪೇಟೆಯ ಹೃದಯ ಭಾಗದಲ್ಲಿರೋ ಪಾದಗಟ್ಟಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಿ ಭಾಷಣ ಮಾಡಲು ಹಿಂದೂ ಕಾರ್ಯಕರ್ತರು ಮುಂದಾಗಿದ್ದು ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ.
ಇದರಿಂದ ಮೊದಲಿಗೆ ವಾಗ್ವಾದ ಆರಂಭವಾಗಿ ಅದು ಲಾಠಿ ಚಾರ್ಜ್ ಆಗೋ ಮಟ್ಟಕ್ಕೆ ಹೋಯ್ತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಸಂಘಟನೆ ಮುಖಂಡರಾದ ಗಂಗಾಧರ ಕುಲಕರ್ಣಿ, ಸಂಜೀವ್ ಮರಡಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನೂಕಾಟ ತಳ್ಳಾಟ ನಡೆಯಿತು. ಸ್ವತಃ ವಿಜಯನಗರ ಎಸ್ಪಿ ಅರುಣ್ ಕುಮಾರ ಲಾಠಿ ಬೀಸೋ ಮೂಲಕ ಪ್ರತಿಭಟನೆಯನ್ನು ಚದುರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಎಸ್ಪಿ ಅರುಣ್ ಕುಮಾರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗಾದರೂ ಯಾವ ವಿಷಯಕ್ಕಾದರೂ ಪ್ರತಿಭಟನೆ ಮಾಡಲು ಅವಕಾಶವಿದೆ. ಆದರೆ ಪ್ರತಿಭಟನೆ ನೆಪದಲ್ಲಿ ರಸ್ತೆ ತಡೆಯೋದು, ಬಲವಂತದ ಬಂದ್ ಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಇಲ್ಲಿ ಸಂಘಟಕರು ಕೇವಲ ಪ್ರತಿಭಟನೆಗೆ ಮಾತ್ರ ಅನುಮತಿ ಪಡೆದಿದ್ದರು. ಆದರೆ, ನಡು ಬೀದಿಯಲ್ಲಿ ವೇದಿಕೆ ಹಾಕೋ ಮೂಲಕ ಟ್ರಾಫಿಕ್ ಜಾಮ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಲಾಠಿ ಚಾರ್ಜ್ ಮಾಡಬೇಕಾಯ್ತು. ಹಲವರ ಬಂಧನವಾಗಿದೆ. ವಿಚಾರಣೆ ಮಾಡಿ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು.



Join Whatsapp