ಎಂಎಸ್ ಐಎಲ್ ನಿಂದ ಶೀಘ್ರ ಔಷಧಿ ಮಳಿಗೆ: ಹರತಾಳು ಹಾಲಪ್ಪ

Prasthutha|

ಬೆಂಗಳೂರು: ಮುಂದಿನ ದಿನಗಳಲ್ಲಿ ಎಂಎಸ್ ಐಎಲ್ ಪ್ರಸ್ತುತ 2900 ಕೋಟಿಯಿಂದ 3400 ಕೋಟಿ ರೂಪಾಯಿವರೆಗೆ ವಹಿವಾಟು ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ ಎಂದು ಎಂಎಸ್ ಐ ಎಲ್ ಅಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು.

- Advertisement -

ಬೆಂಗಳೂರಿನಲ್ಲಿಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ ವತಿಯಿಂದ ಇನ್ನು ಮುಂದೆ 110 ಕೋಟಿ ರೂಪಾಯಿ ಲಾಭಗಳಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ 970 ಮದ್ಯ ಮಳಿಗೆಗಳಿದ್ದು, ಇವುಗಳಿಂದ ಇನ್ನಷ್ಟು ಆದಾಯ ಗಳಿಸುವ ಗುರಿ ಹೊಂದಲಾಗಿದೆ. ಇದರ ಜತೆಗೆ ಸಂಸ್ಥೆ ವತಿಯಿಂದ ಆಧುನಿಕವಾಗಿ ಸುಸಜ್ಜಿತವಾದ 200 ಲಿಕ್ಕರ್ ಮಾರ್ಟ್ ತೆರೆಯಲಾಗುವುದು. ಈ ಕುರಿತು ಸಂಬಂಧ ಪಟ್ಟ ಸಚಿವರ ಜತೆ ಚರ್ಚೆ ನಡೆಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ  ಮದ್ಯ ಮಳಿಗೆ ರೀತಿಯಲ್ಲಿಯೇ ಎಂಎಸ್ ಐಎಲ್ ವತಿಯಿಂದ ಔಷಧಿ ಮಳಿಗೆಗಳನ್ನು ತೆರೆಯಲಾಗುವುದು.  ಚಿಂಟ್ ಪಂಡ್ ನಿಂದ 350 ಕೋಟಿ ರೂಪಾಯಿನಿಂದ 500ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತದೆ ಎಂದು ಹೇಳಿದರು.

- Advertisement -

ರಷ್ಯಾ ಮತ್ತು ಉಕ್ರೇನ್ ಯುದ್ದ ಸಂದರ್ಭದಲ್ಲಿ ಸಿಲುಕಿದ ರಾಜ್ಯದ 550 ವಿದ್ಯಾರ್ಥಿಗಳನ್ನು ಕೆರೆ ತರುವಲ್ಲಿ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ ಎಂದು ತಿಳಿಸಿದರು.



Join Whatsapp