ಆಡುತ್ತಾ ಭಾರತದ ಗಡಿ ದಾಟಿ ಬಂದ ಪಾಕಿಸ್ತಾನಿ ಮಗು: ಮರಳಿಸಿದ ಸೈನಿಕರು

Prasthutha|

ಚಂಡೀಗಢ: ಆಡುತ್ತಾ ಪಾಕಿಸ್ತಾನದ ಗಡಿ ದಾಟಿ ಭಾರತ ಪ್ರವೇಶಿಸಿದ್ದ ಮೂರು ವರ್ಷದ ಮಗುವೊಂದನ್ನು ಗಡಿ ಭದ್ರತೆಯ ಸಿಬ್ಬಂದಿ ಪಾಕಿಸ್ತಾನಿ ರೇಂಜರ್ ಗಳಿಗೆ ಹಸ್ತಾಂತರಿಸಿದ ಘಟನೆ ಪಂಜಾಬಿನ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.

- Advertisement -


ಪಾಕಿಸ್ತಾನದ ಮಗುವೊಂದು ಆಟವಾಡುತ್ತಾ ತನಗರಿವಿಲ್ಲದೇ ಭಾರತದ ಗಡಿ ದಾಟಿ ಬಂದಿತ್ತು. ರಾತ್ರಿ ವೇಳೆ ಆ ಮಗು ದಾರಿ ಕಾಣದೆ ಸುತ್ತಾಡುತ್ತಿತ್ತು. ಈ ವೇಳೆ ಮಗು ಅಳುತ್ತಿರುವ ಶಬ್ದವನ್ನು ಗಮನಿಸಿದ ಬಿಎಸ್ ಎಫ್ ಪಂಜಾಬ್ ಫ್ರಾಂಟಿಯರ್ ನ 182 ಬೆಟಾಲಿಯನ್ ಸೈನಿಕರು ಪಾಕಿಸ್ತಾನಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪಾಕಿಸ್ತಾನದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಚಾತುರ್ಯದಿಂದ ಗಡಿ ದಾಟಿದ ಪ್ರಕರಣ ಎಂದು ಅರಿತ ಬಿಎಸ್ ಎಫ್ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಗಡಿಗೆ ತೆರಳಿ ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಭಾರತೀಯ ಸೈನಿಕರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



Join Whatsapp