ಶಿವಸೇನೆ –ಬಿಜೆಪಿ ಫೈಟ್ ಶುರು : ಸ್ಪೀಕರ್ ಹುದ್ದೆಗೆ ಶಿವಸೇನೆಯ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಕೆ

Prasthutha|

ಮುಂಬೈ; ಶಿವಸೇನೆಯ ರಾಜನ್ ಸಾಲ್ವಿ ಇಂದು ವಿಧಾನಸಭೆ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ರಾಹುಲ್ ನಾರ್ವೇಕರ್ ಕಣಕ್ಕಿಳಿದಿದ್ದು, ಇದೀಗ ರಾಜನ್ ಸಾಲ್ವಿ ಮತ್ತು ರಾಹುಲ್ ನಾರ್ವೇಕರ್ ನಡುವೆ ಹಣಾಹಣಿ ನಡೆಯುವುದು ಖಚಿತವಾಗಿದೆ.

- Advertisement -

ಶಿವಸೇನೆಯಲ್ಲಿ ಏಕನಾಥ್ ಶಿಂದೆ ಮತ್ತು 39 ಶಾಸಕರು ಬಂಡಾಯವೆದ್ದಿದ್ದರು. ಆದರೆ ರಾಜನ್ ಸಾಲ್ವಿ ಶಿವಸೇನೆಯಲ್ಲೇ ಉಳಿದಿದ್ದರು. ಹೀಗಾಗಿ ಅವರಿಗೆ ವಿಧಾನಸಭೆ ಸ್ಪೀಕರ್ ಹುದ್ದೆಗೆ ಸ್ಪರ್ಧಿಸಲು ಶಿವಸೇನೆ ಅವಕಾಶ ನೀಡಿದ್ದು, ರಾಜನ್ ಸಾಲ್ವಿ ನಾಮಪತ್ರ ಸಲ್ಲಿಸಿದ್ದಾರೆ.

ಮತ್ತೊಂದೆಡೆ, ಎನ್‌ಸಿಪಿ ಈಗ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಂಡಿದ್ದು, ವಿಧಾನಸಭೆ ಸ್ಪೀಕರ್ ಚುನಾವಣೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಶಿವಸೇನೆಯ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಸ್ಪೀಕರ್ ಹುದ್ದೆಗೆ ಚುನಾವಣೆ ಅನಿವಾರ್ಯವಾಗಿದ್ದು, ನಾಳೆ ಮಹಾರಾಷ್ಟ್ರ ಸ್ಪೀಕರ್ ಹುದ್ದೆಗೆ ಚುನಾವಣೆ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.

- Advertisement -

ಕಾಂಗ್ರೆಸ್ ನಾಯಕ‌ ಬಾಳಾ ಸಾಹೇಬ್ ಥೋರಟ್, ಅಶೋಕ್ ಚವ್ಹಾಣ್, NCP ನಾಯಕ ಜಯಂತ್ ಪಾಟೀಲ್, ಧನಂಜಯ ಮುಂಡೆ ಉಪಸ್ಥಿತಿಯಲ್ಲಿ ರಾಜನ್ ಸಾಲ್ವಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.



Join Whatsapp