ಕೃಷಿ ಪ್ರದೇಶಗಳ ಭೂ ಸ್ವಾಧೀನ: ಹೋರಾಟಗಾರರಿಂದ ಗ್ರಾಮಗಳಿಗೆ ಭೇಟಿ

Prasthutha|

ಮಂಗಳೂರು: ಭೂಸ್ವಾಧೀನದ ಉದ್ದೇಶ, ಪುನರ್ವಸತಿಯ ಕುರಿತಾಗಿ ಸ್ಪಷ್ಟ ಮಾಹಿತಿ ಒದಗಿಸದೆ ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಮುಲ್ಕಿ ತಾಲೂಕಿನ ಕೃಷಿ ಪ್ರಧಾನ ಗ್ರಾಮಗಳಾದ ಬಳ್ಕುಂಜೆ, ಐಕಳ, ಕೊಲ್ಲೂರು, ಕರ್ನಿರೆ  ಮೊದಲಾದ ಗ್ರಾಮಗಳಿಗೆ ಭೇಟಿ ನೀಡಲಾಯಿತು.

- Advertisement -

ಭೂಸ್ವಾಧೀನ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಗ್ರಾಮದ ಮುಖಂಡರೊಂದಿಗೆ ಮಾಹಿತಿ ಪಡೆದು ಚರ್ಚಿಸಲಾಯಿತು.ಹಿರಿಯ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಮುನೀರ್ ಕಾಟಿಪಳ್ಳ, ಪ್ರಾಂತ ರೈತ ಸಂಘದ ಯಾದವ ಶೆಟ್ಟಿ, ಡಿವೈಎಫ್ ಐನ ಶ್ರೀನಾಥ್ ಕುಲಾಲ್, ನಿತಿನ್ ಬಂಗೇರ, ನ್ಯಾಯವಾದಿ ಅಶ್ವಿನಿ ಡಿ ಹೆಗ್ಡೆ ನಿಯೋಗದಲ್ಲಿದ್ದರು



Join Whatsapp