ಅಯೋಧ್ಯೆ ರಥಯಾತ್ರೆಯವರೆಗೆ ದೇಶದೊಳಗೆ ಉಗ್ರರು ಇರಲಿಲ್ಲ: ವೀರಪ್ಪ ಮೊಯ್ಲಿ

Prasthutha|

ಬೆಂಗಳೂರು: ದೇಶದಲ್ಲಿ ಅಯೋಧ್ಯಾ ರಥ ಯಾತ್ರೆ ನಡೆಯುವವರೆಗೆ ಉಗ್ರಗಾಮಿಗಳು ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

- Advertisement -

ಉದಯ್ ಪುರ ಹತ್ಯೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯಾ ರಥಯಾತ್ರೆ ನಡೆಯುವವರೆಗೆ ಡೊಮೆಸ್ಟಿಕ್ ಟೆರರಿಸಂ ಇರಲಿಲ್ಲ. ದೇಶೀಯ ಉಗ್ರಗಾಮಿ ವ್ಯವಸ್ಥೆ ಆಮೇಲೆ ಹುಟ್ಟಿಕೊಂಡಿತು.
ಆಂತರಿಕ ಭಯೋತ್ಪಾದನೆ ಮೊದಲು ಹತ್ತಿಕ್ಕಬೇಕು. ಈ ಕೆಲಸ ಮೊದಲು ಆಗಬೇಕು. ತರಬೇತಿ ಕೊಡುವುದನ್ನು ಹತ್ತಿಕ್ಕಬೇಕು. ನೆಮ್ಮದಿ ಕದಡಲು ಎಲ್ಲರೂ ಕಾರಣ. ಪ್ರಚೋದನೆ ಎರಡೂ ಕಡೆಯಿಂದ ಬಂದಾಗ ಸಮಸ್ಯೆ ಆಗುತ್ತದೆ. ಪ್ರಚೋದನೆ ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ವೀರಪ್ಪ ಮೊಯ್ಲಿ ಆಗ್ರಹಿಸಿದರು.



Join Whatsapp