ಉದಯಪುರ ಹತ್ಯೆ ಬೆನ್ನಲ್ಲೇ ನನಗೂ ಕೊಲೆ ಬೆದರಿಕೆ ಇದೆ ಎಂದ ನವೀನ್ ಕುಮಾರ್ ಜಿಂದಾಲ್

Prasthutha|

ನವದೆಹಲಿ: ರಾಜಸ್ತಾನದ ಉದಯಪುರದಲ್ಲಿ ಒಬ್ಬ ದರ್ಜಿಯನ್ನು ಇಬ್ಬರು ಕ್ರೂರವಾಗಿ ಕೊಂದ ಸುದ್ದಿಯ ಬೆನ್ನಿಗೆ ಬಿಜೆಪಿಯಿಂದ ವಜಾ ಆಗಿರುವ ಆ ಪಕ್ಷದ ವಕ್ತಾರ ನವೀನ್ ಕುಮಾರ್ ಜಿಂದಾಲ್ ತನಗೆ ಕೊಲೆ ಬೆದರಿಕೆ ಬರುತ್ತಿರುವುದಾಗಿ ಬುಧವಾರ ಬೆಳಿಗ್ಗೆ ಹೇಳಿದ್ದಾರೆ. 

- Advertisement -

ಕಳೆದ ತಿಂಗಳು ಪ್ರವಾದಿ ಮುಹಮ್ಮದ್ ರನ್ನು ನಿಂದಿಸಿ ಹೇಳಿಕೆ ನೀಡಿದ ನೂಪುರ್ ಶರ್ಮಾರನ್ನು ಬಿಜೆಪಿಯಿಂದ ಅಮಾನತು ಮಾಡಿದ್ದರೆ, ನವೀನ್ ಜಿಂದಾಲ್ ರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ನನಗೆ ಬಂದ ಕೊಲೆ ಬೆದರಿಕೆಗಳ ಬಗೆಗೆ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಜಿಂದಾಲ್ ತಿಳಿಸಿದರು.

“ಇಂದು ಬೆಳಿಗ್ಗೆ 6:43 ಗಂಟೆಗೆ ನನಗೆ ಮಿಂಚಂಚೆಯಲ್ಲಿ ಮೂರು ವೀಡಿಯೋ ಕ್ಲಿಪ್ ಗಳು ಬಂದವು. ಅದರಲ್ಲಿ ಉದಯಪುರದಲ್ಲಿ ಕನ್ಹಯ್ಯ ಲಾಲ್ ಕತ್ತನ್ನು ಸೀಳುವುದನ್ನು ತೋರಿಸಲಾಗಿದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಇದೇ ಗತಿ ಬರಲಿದೆ ಎಂದು ಅವರು ನನಗೆ ಬೆದರಿಕೆ ಹಾಕಿದ್ದಾರೆ. ನಾನು ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ವಿಷಯ ತಿಳಿಸಿದೆ.” ಎಂದು ಟ್ವೀಟ್ ಮಾಡಿರುವ ನವೀನ್ ಜಿಂದಾಲರು ಆ ಫೋಟೋಗಳು ಸ್ಕ್ರೀನ್ ಶಾಟ್ ಗಳಾಗಿದ್ದು, ಅದರ ಮೂಲಕ ಬೆದರಿಕೆ ಹಾಕಲಾಗಿದೆ.



Join Whatsapp