ಐವರ ಪೈಕಿ ನಾಲ್ವರು AIMIM ಶಾಸಕರು ಆರ್ ಜೆ ಡಿಗೆ : ಬಿಹಾರದಲ್ಲಿ ಉವೈಸಿಗೆ ದೊಡ್ಡ ಹೊಡೆತ

Prasthutha|

ಪಾಟ್ನಾ: ಬಿಹಾರದಲ್ಲಿ ಕಳೆದ 2020ರ ವಿಧಾನಸಭಾ ಚುನಾವಣೆಯಲ್ಲಿ ಜಯಿಸಿದ್ದ ಐವರು ಎಂ ಐ ಎಂ ಶಾಸಕರ ಪೈಕಿ ನಾಲ್ವರು ಶಾಸಕರು ತೇಜಸ್ವಿ ಯಾದವ್ ಅವರ ಆರ್ ಜೆ ಡಿಗೆ ಸೇರ್ಪಡೆಯಾಗಿದ್ದಾರೆಂದು ವರದಿಗಳು ತಿಳಿಸಿದೆ.

- Advertisement -

ಶಾನವಾಝ್, ಮುಹಮ್ಮದ್ ಅನ್ಸಾರ್ ನಯೀಮಿ, ಮುಹಮ್ಮದ್ ಇಝಾರ್ ಆಸಿಫಿ ಮತ್ತು ಸಯ್ಯದ್ ರುಕುನುದ್ದೀನ್  ಆರ್ ಜೆ ಡಿಗೆ ಸೇರ್ಪಡೆಯಾಗಲಿರುವ ಎಂ ಐ ಎಂ ಶಾಸಕರು.

  ಬಿಹಾರ ವಿರೋಧ ಪಕ್ಷದ ನಾಯಕರಾಗಿರುವ ತೇಜಸ್ವಿ ಯಾದವ್ ಇಂದು ತನ್ನ ಸ್ವಂತ ಕಾರಿನಲ್ಲಿ ಈ ನಾಲ್ವರು ಶಾಸಕರೊಂದಿಗೆ ವಿಧಾನಸಭೆಗೆ ಹಾಜರಾಗಿದ್ದರು. ಆಗಲೇ ಈ ಶಾಸಕರ ಆರ್ ಜೆ ಡಿ ಸೇರ್ಪಡೆ ಕುರಿತು ಸಂಶಯ ಮೂಡಿತ್ತು.

- Advertisement -

ಇದರೊಂದಿಗೆ ಬಿಹಾರ ವಿಧಾನಸಭೆಯಲ್ಲಿ ಆರ್ ಜೆಡಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಪ್ರಸ್ತುತ ಆರ್ ಜೆಡಿಯಲ್ಲಿ 76 ಶಾಸಕರು ಇದ್ದರು. ಬಿಜೆಪಿಯ 77 ಶಾಸಕರು ಇದ್ದಾರೆ.



Join Whatsapp