ಜೈಪುರ: ಟೈಲರ್ ಅಂಗಡಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಟೈಲರ್ ಕನ್ಹಯ್ಯಾ ಲಾಲ್ ಎಂಬಾತನ ಹತ್ಯೆ ನಡೆಸಿದ್ದು, ರಾಜಸ್ಥಾನದ ಉದಯಪುರ ಉದ್ವಿಗ್ನಗೊಂಡಿದೆ.
ಕನ್ನಯ್ಯಲಾಲ್ ಹತ್ಯೆ ಮಾಡಿದ ಇಬ್ಬರು ಅನ್ಯ ಮತದ ಯುವಕರು, ಹತ್ಯೆ ಮಾಡುವುದನ್ನು ವೀಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ನಾವೇ ಹತ್ಯೆ ಮಾಡಿರುವುದಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದು, ಪ್ರಧಾನಿ ಮೋದಿಯನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹತ್ಯೆಗೊಳಗಾದ ಕನ್ನಯ್ಯಲಾಲ್ ಈ ಹಿಂದೆ ಪ್ರವಾದಿಯವರನ್ನು ಅವಹೇಳನ ಮಾಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ್ದ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.