ನವದೆಹಲಿ; ಪಂಜಾಬ್ ಕೇಡರ್ ನ 1987ರ ಬ್ಯಾಚ್ ನ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ ಐಎ) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಯೋಗೀಶ್ ಚಂದ್ರ ಮೋದಿ ಅವರಿಂದ ತೆರವಾದ ಸ್ಥಾನ ತುಂಬಿರುವ ಗುಪ್ತಾ, ಮಾರ್ಚ್ 31, 2024 ರವರೆಗೆ ಎನ್ ಐಎ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಂಜಾಬ್ ಪೊಲೀಸ್ ಮಾಜಿ ಡಿಜಿಪಿ ಆಗಿದ್ದ ಇವರು ಅವರು ಪ್ರಸ್ತುತ ಪಂಜಾಬ್ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಎರಡು ವರ್ಷ ಏಳು ತಿಂಗಳು ಪಂಜಾಬ್ ಡಿಜಿಪಿಯಾಗಿ ಸೇವೆ ಸಲ್ಲಿಸಿದ ಇವರು ಕೇಂದ್ರ ಮಟ್ಟದ ಹುದ್ದೆಗಾಗಿ ಎದುರು ನೋಡುತ್ತಿದ್ದರು.
ಗುಪ್ತಾ ಅವರು ಎನ್ ಐಎ ಹೊಸ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಮುಂದೆ ಹಲವು ಸವಾಲುಗಳಿವೆ. ಹಲವು ಪ್ರಮುಖ ಪ್ರಕರಣಗಳ ತನಿಖೆ ನಡೆಸುತ್ತಿರುವ ಎನ್ ಐಎ, ಈ ಪ್ರಕರಣಗಳ ಸತ್ಯಾಸತ್ಯತೆ ಬಯಲಿಗೆಳೆಯಬೇಕಾದ ಜವಾಬ್ದಾರಿ ಗುಪ್ತಾ ಅವರ ಮೇಲಿದೆ.