ರಜೆ ಕೊಡುತ್ತಿಲ್ಲ ಎಂದು ಡಿಸಿಪಿ ವಿರುದ್ಧ ದೂರು ಕೊಟ್ಟ ಪೊಲೀಸ್ ಕಾನ್ಸ್‌ಟೇಬಲ್

Prasthutha|

ಬೆಂಗಳೂರು: ನಾಲ್ಕು ಪುಟಗಳಲ್ಲಿ ತನ್ನ ಮೇಲೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಪತ್ರದಲ್ಲಿ ಉಲ್ಲೇಖ ಮಾಡಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ವಿಧಾನಸೌಧದ ಭದ್ರತಾ ಡಿಸಿಪಿ ವಿರುದ್ಧ ದೂರು ನೀಡಿದ್ದಾರೆ.

- Advertisement -

ಡಿಸಿಪಿ ವಿರುದ್ಧ ಕಾನ್ಸ್‌ಟೇಬಲ್ (ಚಾಲಕ) ಪವನ್ ತಿರುಗಿ ಬಿದ್ದಿದ್ದಾರೆ. .ವಿಧಾನಸೌಧ ಭದ್ರತಾ ಡಿಸಿಪಿಯ ಹೆಸರು ಸೂಚಿಸದೇ ವಿಧಾನಸೌದ ಭದ್ರತಾ ಡಿಸಿಪಿ ಎಂದಷ್ಟೇ ದೂರಿನಲ್ಲಿ ಉಲ್ಲೇಖ ಮಾಡಿ ಪವನ್ ದೂರು ದಾಖಲಿಸಿದ್ದಾರೆ.

ದಿನದಲ್ಲಿ 13 ರಿಂದ ಹದಿನಾಲ್ಕು ಗಂಟೆ ಅವಧಿ ಮೀರಿ ಕೆಲಸ‌ ಮಾಡಿಸುತ್ತಾರೆ. ವಾರದ ರಜೆ ಹೊರತುಪಡಿಸಿ ಉಳಿದಂತೆ ರಜೆ ನೀಡುವುದಿಲ್ಲ. . ದಣಿವಿಲ್ಲದೇ ಕೆಲಸ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಹಲವು ಬಾರಿ ಡಿಸಿಪಿ ಬಳಿ ಮನವಿ ಮಾಡಿಕೊಂಡಿರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.



Join Whatsapp